ನ್ಯೂಯಾರ್ಕ್:'ಅಮೆರಿಕ ಸೀನಿದರೆ ಭಾರತದ ಮಾರುಕಟ್ಟೆಗೆ ಶೀತವಾಗುತ್ತದೆ' ಎಂಬ ಮಾತಿನಂತೆ ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಭಾರತ ಮಾತ್ರವಲ್ಲದೇ ಜಾಗತಿಕ ಷೇರುಪೇಟೆಗಳ ಮೇಲೆ ಪ್ರಭಾವ ಬೀರಿದೆ.
ಕೋವಿಡ್- 19 ಸೋಂಕಿನ ಪ್ರಭಾವದಿಂದ ಉದ್ಭವಿಸಿರುವ ಅಮೆರಿಕದ ಆರ್ಥಿಕ ಹಿಂಜರಿಕೆಯನ್ನು ಹಿಮ್ಮೆಟ್ಟಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಘೋಷಿಸಿದರು. ಶ್ವೇತ ಭವನ 1 ಟ್ರಿಲಿಯನ್ ಡಾಲರ್ನ ಪ್ರಸ್ತಾವನೆಯನ್ನು ಇರಿಸಿತು. ತತ್ಪರಿಣಾಮ ವಾಲ್ ಸ್ಟ್ರೀಟ್ ಫ್ಯೂಚರ್ ಗರಿಷ್ಠ ಶೇ 5ರಷ್ಟು ಇಳಿಕೆಯಾಗಿದೆ.
ಕೊರೊನಾ ವೈರಸ್ನಿಂದ ವ್ಯಾಪಾರ- ವಹಿವಾಟಿಕೆ ಸ್ಥಗಿತವಾದ ಪರಿಣಾಮ ಉಂಟಾದ ನಷ್ಟ ಪ್ರಮಾಣ ನಿವಾರಿಸಲು ಶ್ವೇತಭವನದ ಪ್ರಸ್ತಾಪವು 1 ಟ್ರಿಲಿಯನ್ ಡಾಲರ್ ಖರ್ಚಾಗಬಹುದು ಎಂದಿದೆ. ಫೆಡರಲ್ ರಿಸರ್ವ್ ಹಣಕಾಸು ಮಾರುಕಟ್ಟೆಗಳನ್ನು ಕಾರ್ಯನಿರ್ವಹಿಸಲು ಹೆಚ್ಚಿನ ಕ್ರಮಗಳನ್ನು ಘೋಷಿಸಿದೆ. ಮುಂದಿನ ಎರಡು ವಾರಗಳಲ್ಲಿ ಅಮೆರಿಕನ್ನರಿಗೆ ಬೆಂಬಲ ನೀಡಲು ಸಹಾಯ ಮಾಡಲು ಚೆಕ್ ಕಳುಹಿಸಲು ಟ್ರಂಪ್ ಬಯಸಿದ್ದಾರೆ. ಆದರೆ, ಆರ್ಥಿಕತೆಯ ಹೆಚ್ಚಿನ ವಲಯಗಳು ಸ್ಥಗಿತಗೊಳ್ಳುವ ಸನಿಹದಲಿವೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್ ಹೇಳಿದ್ದಾರೆ.