ನವದೆಹಲಿ: ರಷ್ಯಾ - ಉಕ್ರೇನ್ ಯುದ್ಧದಿಂದಾಗಿ ಜಗತ್ತಿನಾದ್ಯಂತ ಷೇರುಪೇಟೆಗಳನ್ನು ನಷ್ಟದಲ್ಲಿ ಸಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಚ್ಚಾ ತೈಲದ ಬೆಲೆಯೂ 14 ವರ್ಷಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ. ಷೇರು ಮಾರುಕಟ್ಟೆಯಲ್ಲಿನ ಪ್ರಸ್ತುತ ಚಂಚಲತೆ ಹಾಗೂ ಹಣದುಬ್ಬರದಿಂದ ಆತಂಕಕ್ಕೊಳಗಾದ ಜನರು ಈಗ ಸುರಕ್ಷಿತ ಹೂಡಿಕೆಗಾಗಿ ಚಿನ್ನದತ್ತ ಮುಖ ಮಾಡುತ್ತಿದ್ದಾರೆ.
ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಚಿನ್ನ ಕೂಡ ತನ್ನ ಹೊಸ ದಾಖಲೆಯತ್ತ ಸಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು ತೀವ್ರವಾಗಿ ಜಿಗಿದಿದ್ದು, ಪ್ರತಿ 10 ಗ್ರಾಂ ಚಿನ್ನದ ಮೇಲೆ 2500 ರೂಪಾಯಿ ಏರಿಕೆಯಾಗಿದೆ 53,500 ರೂ.ತಲುಪಿದೆ. 2020ರ ಆಗಸ್ಟ್‌ನಲ್ಲಿ ದೇಶಿಯ ಮಾರುಕಟ್ಟೆಗಳಲ್ಲಿ ಚಿನ್ನವು ದಾಖಲೆಯ ಗರಿಷ್ಠ 56,200 ರೂ.ಗೆ ತಲುಪಿರುವುದು ಈವರೆಗೆನ ಗರಿಷ್ಠ ಮಟ್ಟದ ದಾಖಲೆಯಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 2,000.69 ಡಾಲರ್‌ಗೆ ತಲುಪಿದೆ. ಬಳಿಕ 1,998.37 ಡಾಲರ್‌ಗೆ ಬಂದು ನಿಂತಿದೆ. ಇದು 18 ತಿಂಗಳುಗಳಲ್ಲಿ ಅತ್ಯಧಿಕವಾಗಿದೆ.