ಮುಂಬೈ:ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ನ ಅಂಗಸಂಸ್ಥೆಯಾದ ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಐಪಿಒದೊಂದಿಗೆ ಪ್ರಾಥಮಿಕ ಮಾರುಕಟ್ಟೆಗಳತ್ತ ಸಾಗಿದ್ದು, ಇಂದಿನಿಂದ ಆರಂಭವಾಗಿದೆ. ಒಟ್ಟು ಇಶ್ಯೂ ಸೈಜ್ 1,513 ಕೋಟಿ ರೂ.ಗಳಾಗಿದ್ದರೆ, ಷೇರು ಮಾರಾಟವು 1,060 ಕೋಟಿ ರೂ.ಗಳ ಹೊಸ ಷೇರುಗಳನ್ನು ಒಳಗೊಂಡಿದೆ. ಇನ್ನು ಪ್ರೊಮೋಟರ್ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ 453 ಕೋಟಿ ರೂ.ಗೆ ಮಾರಾಟ ಮಾಡುವ ಪ್ರಸ್ತಾಪ ಒಳಗೊಂಡಿದೆ.
Glenmark ಲೈಫ್ ಸೈನ್ಸಸ್ ಐಪಿಒ ಇಂದಿನಿಂದ ಆರಂಭ
ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಇಶ್ಯೂ ಸೈಜ್ 1,513 ಕೋಟಿ ರೂ.ಗಳಾಗಿದ್ದರೆ, ಷೇರು ಮಾರಾಟವು 1,060 ಕೋಟಿ ರೂ.ಗಳನ್ನು ಒಳಗೊಂಡಿದೆ.
ಮೂರು ದಿನಗಳ ಐಪಿಒ ಜುಲೈ 29ರಂದು ಮುಕ್ತಾಯಗೊಳ್ಳಲಿದ್ದು, ಐಪಿಒಗೆ 695-720 ರೂ.ಗಳ ಬೆಲೆ ನಿಗದಿಪಡಿಸಿದೆ. ಕಂಪನಿಯ ಪ್ರಕಾರ, ವಿತರಣೆಯಿಂದ ಬರುವ ಆದಾಯವನ್ನು ಎಪಿಐ ವ್ಯವಹಾರದ ಸ್ಪಿನ್ - ಆಫ್ ಮಾಡಲು ಮತ್ತು ಅವಶ್ಯಕತೆಗಳಿಗೆ ಹಣ ಒದಗಿಸಲು ಬಳಸಲಾಗುತ್ತದೆ ಎಂದು ಹೇಳಿದೆ. ಶೇ. 35ರಷ್ಟು ಚಿಲ್ಲರೆ ಹೂಡಿಕೆದಾರರಿಗೆ ಮತ್ತು ಉಳಿದ ಶೇ.15 ರಷ್ಟನ್ನು ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಿಡಲಾಗಿದೆ.
ಇನ್ನು ಗೋಲ್ಡ್ಮನ್ ಸ್ಯಾಚ್ಸ್ (ಇಂಡಿಯಾ) ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್, ಎಸ್ಬಿಐ ಕ್ಯಾಪಿಟಲ್ ಮಾರ್ಕೆಟ್ಸ್, ಕೊಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ, ಬೋಫಾ ಸೆಕ್ಯುರಿಟೀಸ್ ಇಂಡಿಯಾ ಲಿಮಿಟೆಡ್, ಡಿಎಎಂ ಕ್ಯಾಪಿಟಲ್ ಅಡ್ವೈಸರ್ಸ್ ಲಿಮಿಟೆಡ್ ಮತ್ತು ಬೋಫಾ ಕ್ಯಾಪಿಟಲ್ ಮಾರ್ಕೆಟ್ಸ್ ಕಂಪನಿಯ ಇಕ್ವಿಟಿ ಷೇರುಗಳನ್ನು ಆಗಸ್ಟ್ 6 ರಂದು ಬಿಎಸ್ಇ ಮತ್ತು ಎನ್ಎಸ್ಇಗಳಲ್ಲಿ ಪಟ್ಟಿ ಮಾಡುವ ಸಾಧ್ಯತೆಯಿದೆ.