ನವದೆಹಲಿ: ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021ಯನ್ನು ಲೋಕಸಭೆಯಲ್ಲಿ ಅಂಗೀಕರಿಸುವ ಮೂಲಕ ಹಿಂದಿನ ತೆರಿಗೆ ನೀತಿಯನ್ನ ಸರ್ಕಾರ ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ-2021 ಅನ್ನು ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದನ್ನು ರಾಜ್ಯಸಭೆಯು ಅಂಗೀಕರಿಸಿದಾಗ, 2012ರ ಮೇ 28 ಕ್ಕಿಂತ ಮುಂಚಿತವಾಗಿ ಭಾರತೀಯ ಆಸ್ತಿಗಳ ಪರೋಕ್ಷ ವರ್ಗಾವಣೆ ಕುರಿತು 2012ರ ಶಾಸನವನ್ನು ಬಳಸಿಕೊಂಡು ಕೈರ್ನ್ ಎನರ್ಜಿ ಮತ್ತು ವೊಡಾಫೋನ್ ನಂತಹ ಕಂಪನಿಗಳ ಮೇಲಿನ ಎಲ್ಲ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲಾಗುತ್ತದೆ.