ಕರ್ನಾಟಕ

karnataka

ETV Bharat / business

ಸ್ಪೆಷಲ್​ ಡೇಗಳಲ್ಲಿ ನಿಮ್ಮ ಆತ್ಮೀಯರಿಗೆ 'ಸ್ವದೇಶಿ ವಸ್ತು'ಗಳನ್ನೇ ಉಡುಗೊರೆಯಾಗಿ ಕೊಡಿ: ಗೋಯಲ್ ಕರೆ - ವಾಣಿಜ್ಯ ಸುದ್ದಿ

'ಸ್ವದೇಶಿ' ಸರಕುಗಳನ್ನು ಉತ್ತೇಜಿಸುವುದರಿಂದ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ. ಭಾರತವು ಸ್ವಾತಂತ್ರ್ಯ ಪಡೆದ 75ನೇ ವರ್ಷದ ಪ್ರಯುಕ್ತ 2022ರವರೆಗೆ ಮುಂದಿನ ಮೂರು ವರ್ಷಗಳವರೆಗೆ 'ಸ್ವದೇಶಿ' ಸರಕುಗಳಿಗೆ ಉತ್ತೇಜನೆ ನೀಡುತ್ತೇವೆ ಎಂದು ಜನರು ಪ್ರತಿಜ್ಞೆ ಮಾಡಬೇಕೆಂದು 20ನೇ ಹುನ್ನಾರ್ ಹಾತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು.

Piyush Goyal
ಗೋಯಲ್​

By

Published : Feb 13, 2020, 6:32 PM IST

ನವದೆಹಲಿ: ಹಬ್ಬ- ಹರಿದಿನ, ಉತ್ಸವಗಳಂತಹ ಸಂದರ್ಭಗಳಲ್ಲಿ ಜನರು ತಮ್ಮ ಆತ್ಮಿಯರಿಗೆ ಸ್ಥಳೀಯ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

20ನೇ ಹುನ್ನಾರ್ ಹಾತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸ್ವದೇಶಿ' ಸರಕುಗಳನ್ನು ಉತ್ತೇಜಿಸುವುದರಿಂದ ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ. ಭಾರತವು ಸ್ವಾತಂತ್ರ್ಯ ಪಡೆದ 75ನೇ ವರ್ಷದ ಪ್ರಯುಕ್ತ 2022ರವರೆಗೆ ಮುಂದಿನ ಮೂರು ವರ್ಷಗಳವರೆಗೆ 'ಸ್ವದೇಶಿ' ಸರಕುಗಳಿಗೆ ಉತ್ತೇಜನ ನೀಡುತ್ತೇವೆ ಎಂದು ಜನರು ಪ್ರತಿಜ್ಞೆ ಮಾಡಬೇಕೆಂದು ಹೇಳಿದರು.

ಹಬ್ಬಗಳಲ್ಲಿ ನೀಡುವ ಉಡುಗೊರೆಗಳು ನಮ್ಮ ಕುಶಲಕರ್ಮಿಗಳು ಮಾಡಿದ ಸ್ಥಳೀಯ ವಸ್ತುಗಳೇ ಇರಬೇಕು ಎಂದು ಪ್ರತಿಯೊಬ್ಬರೂ ದೇಶಾದ್ಯಂತ ಜಾಗೃತಿ ಮೂಡಿಸಬೇಕೆಂದು ವಿನಂತಿಸುತ್ತೇನೆ. ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯೊಂದಿಗೆ ಮುಂದುವರಿಯಲು ಅವರ ಗೌರವಾರ್ಥವಾಗಿ 'ಸ್ವದೇಶಿ' ಘೋಷಣೆ ಹೊರಡಿಸಬೇಕು ಎಂದು ಗೋಯಲ್ ಕರೆಕೊಟ್ಟರು.

ABOUT THE AUTHOR

...view details