ಕರ್ನಾಟಕ

karnataka

ETV Bharat / business

ಲೋಕಸಭೆ ಚುನಾವಣೆಯಿಂದ ವಿಮಾನಯಾನ ಸಾರಿಗೆಗೆ ಶುಕ್ರದೆಶೆ..!

ಉದ್ದಿಮೆಯಲ್ಲಿನ ಕೆಲವು ಅಹಿತಕರ ಘಟನೆಯಿಂದ ನಕರಾತ್ಮಕ ಹಾದಿಯಲ್ಲಿ ಸಾಗುತ್ತಿದ್ದ ವಿಮಾನಯಾನ ಸಾರಿಗೆ, ಲೋಕಸಭೆ ಚುನಾವಣೆಯು ಋಣಾತ್ಮಕ ಮಾರ್ಗದಲ್ಲಿ ಸಾಗುವಂತೆ ಮಾಡಿದೆ. ಈ ವರ್ಷದ ಮಾರ್ಚ್​ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಶೇ 11.2ರಷ್ಟು ಚಾರ್ಟ್​ ಫ್ಲೈಟ್​ಗಳ ಬೇಡಿಕೆ ವೃದ್ಧಿಗೊಂಡಿದೆ.

By

Published : May 5, 2019, 11:23 PM IST

ಇನ್ಫೋಗ್ರಾಪಿಕ್ಸ್​

ನವದೆಹಲಿ:ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ರಾಜಕೀಯ ನಾಯಕರು ಚಾರ್ಟರ್ ವಿಮಾನಗಳನ್ನು ಯಥೇಚ್ಛವಾಗಿ ಬಳಸುತ್ತಿರುವುದರಿಂದ ವಿಮಾನಯಾನ ಸಾರಿಗೆ ಲಾಭದತ್ತ ಮುಖಮಾಡಿದೆ.

ಉದ್ದಿಮೆಯಲ್ಲಿನ ಕೆಲವು ಅಹಿತಕರ ಘಟನೆಯಿಂದ ನಕರಾತ್ಮಕ ಹಾದಿಯಲ್ಲಿ ಸಾಗುತ್ತಿದ್ದ ವಿಮಾನಯಾನ ಸಾರಿಗೆ, ಲೋಕಸಭೆ ಚುನಾವಣೆಯು ಋಣಾತ್ಮಕ ಮಾರ್ಗದಲ್ಲಿ ಸಾಗುವಂತೆ ಮಾಡಿದೆ. ಈ ವರ್ಷದ ಮಾರ್ಚ್​ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಶೇ 11.2ರಷ್ಟು ಚಾರ್ಟ್​ ಫ್ಲೈಟ್​ಗಳ ಬೇಡಿಕೆ ವೃದ್ಧಿಗೊಂಡಿದೆ.

ಇನ್ಫೋಗ್ರಾಪಿಕ್ಸ್​

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ದತ್ತಾಂಶದ ಪ್ರಕಾರ, 2019ರ ಮಾರ್ಚ್​ನಲ್ಲಿ 24,229 ವಿಮಾಗಳು ಹಾರಾಟ ನಡೆಸಿವೆ. ಕಳೆದ ಹಣಕಾಸು ವರ್ಷದ ಇದೇ ತಿಂಗಳಲ್ಲಿ 24,229 ವಿಮಾನಗಳು ಹಾರಾಟ ನಡೆಸಿದ್ದವು. ಮಾರ್ಚ್​​ ತಿಂಗಳ ವಿಮಾನ ಸಾರಿಗೆಯ ಬೆಳವಣಿಗೆಯು ಈ ಹಿಂದಿನ 6 ತಿಂಗಳಲ್ಲಿನ ಅತ್ಯಧಿಕ ಏರಿಕೆಯಾಗಿದೆ. ಎರಡು ತಿಂಗಳ ಲಾಭಾಂಶದ ಪ್ರಮಾಣ ಶೇ 100ರಷ್ಟು ತಲುಪಿದೆ.

ನಮ್ಮ ಎಲ್ಲ ವಿಮಾನಗಳು ಮಾರ್ಚ್ ಮತ್ತು ಏಪ್ರಿಲ್​ನಲ್ಲಿ ಅವಿಶ್ರಾಂತ ಹಾರಾಟ ನಡೆಸಿವೆ. ಈ ಎರಡು ತಿಂಗಳು ಈ ವರ್ಷದ ಅತ್ಯುತ್ತಮ ತಿಂಗಳು. ಚುನಾವಣೆಯ ಸಂದರ್ಭದಲ್ಲಿ ವಿಮಾನಗಳ ಹಾರಾಟ ಸಕ್ರಿಯವಾಗಿದೆ. ಜೊತೆಗೆ ನಿರ್ವಾಹಕರಿಗೆ ಹೆಚ್ಚಿನ ಅವಧಿಯ ಕೆಲಸ ದೊರೆತಿದೆ. ಸಾಮಾನ್ಯ ತಿಂಗಳಲ್ಲಿ ಫ್ಲೈಟ್​ಗಳ ಬೇಡಿಕೆ ಶೇ 80ರಷ್ಟು ಇರುತ್ತದೆ. ಆದರೆ, ಈ ಎರಡು ಮಾಸಿಕದಲ್ಲಿ ಶೇ 100ರಷ್ಟು ಬೇಡಿಕೆ ಕಂಡುಬಂದಿದೆ ಎಂದು ಕ್ಲಬ್ ಒನ್ ಏರ್​ನ ಹಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜನ್ ಮೆಹ್ರಾ ಅವರು ಹೇಳಿದ್ದಾರೆ.

ಕ್ಲಬ್ ಒನ್ ದೇಶದಲ್ಲಿ ಅತಿದೊಡ್ಡ ವಿಮಾನ ನಿರ್ವಾಹಕ ಸಂಸ್ಥೆಯಾಗಿದ್ದು, ಐಷರಾಮಿ ಜೆಟ್​ಗಳನ್ನು ಒದಗಿಸುತ್ತಿದೆ. ದೆಹಲಿ ಮೂಲದ ಈ ಸಂಸ್ಥೆ 10 ವಿಮಾನಗಳನ್ನು ಹೊಂದಿದ್ದು, ಇದರಲ್ಲಿ ಸಿಆರ್​ಜೆ-100, ಫಾಲ್ಕನ್​- 2000 ಮತ್ತು ಸೆಸ್ನಾ ಸೈಟೇಷನ್​ ಎಕ್ಸೆಲ್​ನಂತಹ ಐಷಾರಾಮಿ ವಿಮಾನಗಳಿವೆ.

For All Latest Updates

TAGGED:

ABOUT THE AUTHOR

...view details