ಕರ್ನಾಟಕ

karnataka

ETV Bharat / business

ಮತ್ತೆ ಗಗನ ಮುಖಿಯಾದ ತೈಲ: 79 ಪೈಸೆ ಜಿಗಿದ ಡೀಸೆಲ್​, ಪೆಟ್ರೋಲ್​ ಬೆಲೆ ಎಷ್ಟಿರಬಹುದು? - ಭಾರತದಲ್ಲಿ ಇಂಧಿನ ಡೀಸೆಲ್​ ಬೆಲೆ

ರಾಷ್ಟ್ರರಾಜಧಾನಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 7 ಪೈಸೆ ಮತ್ತು ಡೀಸೆಲ್ 18 ಪೈಸೆಯಷ್ಟು ಏರಿಕೆಯಾಗಿದೆ. ಲೀಟರ್​ ಪೆಟ್ರೋಲ್​ಗೆ 81.53 ರೂ. ಹಾಗೂ ಲೀಟರ್​ ಡೀಸೆಲ್​ಗೆ 71.25 ರೂ. ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ..

Fuel
ಇಂಧನ

By

Published : Nov 23, 2020, 4:19 PM IST

ನವದೆಹಲಿ :ಅಂತಾರಾಷ್ಟ್ರೀಯ ತೈಲ ದರಗಳ ಪರಿಷ್ಕರಣೆಯು ಎರಡು ತಿಂಗಳ ಬಳಿಕ ಮತ್ತೆ ಆರಂಭವಾಗಿದ್ದು, ದೇಶೀಯ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಸತತ 4ನೇ ದಿನವೂ ಪೆಟ್ರೋಲ್​ ಹಾಗೂ ಡೀಸೆಲ್​ ಧಾರಣೆ ಹೆಚ್ಚಳವಾಗಿದೆ.

ರಾಷ್ಟ್ರರಾಜಧಾನಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 7 ಪೈಸೆ ಮತ್ತು ಡೀಸೆಲ್ 18 ಪೈಸೆಯಷ್ಟು ಏರಿಕೆಯಾಗಿದೆ. ಲೀಟರ್​ ಪೆಟ್ರೋಲ್​ಗೆ 81.53 ರೂ. ಹಾಗೂ ಲೀಟರ್​ ಡೀಸೆಲ್​ಗೆ 71.25 ರೂ. ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದಾರೆ.

ಫಿನ್​​ಟೆಕ್​ ವೇಗವರ್ಧನೆಗೆ ವೀಸಾ - ಐಸಿಐಸಿಐ ಬ್ಯಾಂಕ್​ ನಡುವೆ ಒಪ್ಪಂದ

ಸರ್ಕಾರಿ ಸ್ವಾಮ್ಯದ ತೈಲ ವಿತರಣೆಯ ಕಂಪನಿಗಳು ಚಿಲ್ಲರೆ ತೈಲದ ದರವನ್ನು ಶುಕ್ರವಾರದಿಂದ ಹೆಚ್ಚಿಸಲು ಪ್ರಾರಂಭಿಸಿವೆ. ನಾಲ್ಕು ದಿನಗಳಲ್ಲಿ ಪೆಟ್ರೋಲ್ ಬೆಲೆ 47 ಪೈಸೆ ಮತ್ತು ಡೀಸೆಲ್ ದರದ ಮೇಲೆ ಪ್ರತಿ ಲೀಟರ್‌ಗೆ 79 ಪೈಸೆಯಷ್ಟು ಏರಿಕೆಯಾಗಿದೆ.

ಸೆಪ್ಟೆಂಬರ್ 22ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿದ್ದರೇ ಅಕ್ಟೋಬರ್ 2ರಿಂದ ಡೀಸೆಲ್ ದರ ಬದಲಾಗಿ ಯಥಾವತ್ತಾಗಿ ಉಳಿದಿತ್ತು. ಬ್ರೆಂಟ್ ಕಚ್ಚಾ ತೈಲ ಇಂಟರ್ ಕಾಂಟಿನೆಂಟಲ್ ಎಕ್ಸ್​ಚೇಂಜ್​​ನಲ್ಲಿ (ಐಸಿಇ) ಬ್ಯಾರಲ್​ಗೆ 45 ಡಾಲರ್​​ ದಾಟಿದೆ.

ABOUT THE AUTHOR

...view details