ಕರ್ನಾಟಕ

karnataka

ETV Bharat / business

ಫ್ಲಿಪ್‌​ಕಾರ್ಟ್​, ಅಮೆಜಾನ್​, ಪೇಟಿಎಂ ಫೆಸ್ಟಿವಲ್ ಮಾರಾಟ ಶುರು​: ಟಾಪ್​ ಆಫರ್​​ಗಳು ಹೀಗಿವೆ... - online festive sale offer

ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಪೇಟಿಎಂ ಮಾಲ್‌ನಂತಹ ಆನ್​ಲೈನ್​ ಮಾರಾಟಗಾರರು ಮಧ್ಯರಾತ್ರಿಯಿಂದ ತಮ್ಮ ಹಬ್ಬದ ಋತುವಿನ ಮಾರಾಟ ಆರಂಭಿಸಲಿದ್ದಾರೆ. ಮೊಬೈಲ್, ಟಿವಿ, ಕಿಚನ್​ ಸಾಮಗ್ರಿ, ಫ್ಯಾಷನ್, ಸೌಂದರ್ಯ, ಮನೆ ಅಲಂಕಾರಿಕ, ಪೀಠೋಪಕರಣಗಳು, ದಿನಸಿ, ಮಗುವಿನ ಆರೈಕೆ ಉತ್ಪನ್ನಗಳನ್ನು ರಿಯಾಯಿತಿ ಮತ್ತು ಆಫರ್​ಗಳಲ್ಲಿ ನೀಡಲಿದ್ದಾರೆ.

online festive
ಆನ್​ಲೈನ್​ ಫೆಸ್ಟಿವಲ್ ಮಾರಾಟ

By

Published : Oct 16, 2020, 3:18 PM IST

ಬೆಂಗಳೂರು: ಭಾರತದಲ್ಲಿನ ಇ-ಕಾಮರ್ಸ್ ದೈತ್ಯರು ಇಂದು ತಮ್ಮ ವಾರ್ಷಿಕ ಆನ್‌ಲೈನ್ ಶಾಪಿಂಗ್ ಉತ್ಸವ ಪ್ರಾರಂಭಿಸಿದ್ದಾರೆ. ವಿಶ್ವದ ಅತಿದೊಡ್ಡ ಗ್ರಾಹಕ ಮಾರುಕಟ್ಟೆಯಲ್ಲಿ ತಮ್ಮ ಪಾಲು ಪಡೆಯಲು ತೀವ್ರ ಪೈಪೋಟಿ ನಡೆಸುತ್ತಿವೆ.

ದಿ ಬಿಗ್​ ಬಿಲಿಯನ್ ಡೇಸ್

ಫ್ಲಿಪ್​ಕಾರ್ಟ್​ ಕಂಪನಿಯು ಸೀಸನ್​ಗೂ 'ದಿ ಬಿಗ್​ ಬಿಲಿಯನ್ ಡೇಸ್​' (ಟಿಬಿಬಿಡಿ) ಮಾರಾಟದ ಕೊಡುಗೆ ಘೋಷಿಸಿದೆ. ಹಬ್ಬದ ಋತು ಪ್ರಾರಂಭಿಸಿದ ಸಂಸ್ಥೆ ಶನಿವಾರ ತನ್ನ ಪ್ರಮುಖ, ಆರು ದಿನಗಳ 'ದಿ ಬಿಗ್ ಬಿಲಿಯನ್ ಡೇಸ್' ಮಾರಾಟವನ್ನು ಅಕ್ಟೋಬರ್ 16ರಿಂದ 21ರವರೆಗೆ ಪ್ರಾರಂಭಿಸಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಗ್ರಾಹಕರು ಅಕ್ಟೋಬರ್ 15ರಂದು ಮಾರಾಟಕ್ಕೆ ಆರಂಭಿಕ ಪ್ರವೇಶ ಪಡೆಯಬಹುದು.

850 ನಗರಗಳಲ್ಲಿ ಗ್ರಾಹಕರಿಗೆ ಹಬ್ಬದ ಮೆರಗು ತರಲು ಇ-ಕಾಮರ್ಸ್ ಮಾರುಕಟ್ಟೆಯು 50,000ಕ್ಕೂ ಹೆಚ್ಚು ಕಿರಾಣಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆರು ದಿನಗಳ ಮಾರಾಟದ ಸಮಯದಲ್ಲಿ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ.10ರಷ್ಟು ತ್ವರಿತ ರಿಯಾಯಿತಿ ನೀಡುತ್ತದೆ.

ಇದಲ್ಲದೆ, ಬಜಾಜ್ ಫಿನ್‌ಸರ್ವ್ ಇಎಂಐ ಕಾರು ಮತ್ತು ಇತರ ಪ್ರಮುಖ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಕೊಡುಗೆಗಳ ಮೂಲಕ ಯಾವುದೇ ವೆಚ್ಚವಿಲ್ಲದ ಇಎಂಐಗಳನ್ನು ಗ್ರಾಹಕರಿಗೆ ಲಭ್ಯವಾಗುವಂತೆ ನೀಡಲಿದೆ. ಪೇಟಿಎಂ ವ್ಯಾಲೆಟ್​ ಮತ್ತು ಪೇಟಿಎಂ ಯುಪಿಐ ಮೂಲಕ ಪಾವತಿಸುವ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ನೀಡಲು ಫ್ಲಿಪ್‌ಕಾರ್ಟ್ ಸಹ ಪೇಟಿಎಂ ಜತೆ ಪಾಲುದಾರಿಕೆ ಹೊಂದಿದೆ.

ಅಮೆಜಾನ್​ನ ಗ್ರೇಟ್ ಇಂಡಿಯನ್ ಫೆಸ್ಟಿವಲ್

ಫ್ಲಿಪ್‌ಕಾರ್ಟ್ ತನ್ನ 'ಬಿಗ್ ಬಿಲಿಯನ್ ಡೇಸ್' ಮಾರಾಟ ಪ್ರಾರಂಭಿಸಿದ ಒಂದು ದಿನದ ಬಳಿಕ ಅಮೆಜಾನ್ ಇಂಡಿಯಾ 'ಗ್ರೇಟ್ ಇಂಡಿಯನ್ ಫೆಸ್ಟಿವಲ್' (ಜಿಐಎಫ್) ಅನ್ನು ಅಕ್ಟೋಬರ್ 17ರಿಂದ ತೆರೆಯಲಿದೆ.

ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ 16ರಿಂದ ಆರಂಭಿಕ ಪ್ರವೇಶ ಸಿಗಲಿದೆ. 6.5 ಲಕ್ಷಕ್ಕೂ ಅಧಿಕ ಮಾರಾಟಗಾರರು ಅಮೆಜಾನ್.ಇನ್‌ನಲ್ಲಿ ಕೋಟ್ಯಂತರ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಿದೆ. ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಂದ (ಎಸ್‌ಎಮ್‌ಬಿ) 4 ಕೋಟಿ ಉತ್ಪನ್ನಗಳು100 ನಗರಗಳಲ್ಲಿ 20,000ಕ್ಕೂ ಅಧಿಕ ಸ್ಥಳೀಯ ಅಂಗಡಿಗಳಿಂದ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಅಮೆಜಾನ್.ಇನ್ ಪ್ರಕಟಣೆಯಲ್ಲಿ ತಿಳಿಸಿತ್ತು.

ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಜತೆ ಶೇ 10ರಷ್ಟು ರಿಯಾಯಿತಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ, ಎಕ್ಸ್‌ಚೇಂಜ್ ಆಫರ್‌ ಲಭ್ಯವಿದೆ. ಅಮೆಜಾನ್ ಪೇನಲ್ಲಿ 10,000 ರೂ. ಶಾಪಿಂಗ್​ ರಿವಾರ್ಡ್ ದೊರೆಯಲಿವೆ.

ಪೇಟಿಎಂ ಮಾಲ್ ‘ಮಹಾ ಶಾಪಿಂಗ್ ಉತ್ಸವ’

ಪೇಟಿಎಂ ಮಾಲ್ ‘ಮಹಾ ಶಾಪಿಂಗ್ ಉತ್ಸವ’ ಅಕ್ಟೋಬರ್ 16ರಿಂದ ಅಕ್ಟೋಬರ್ 23ರವರೆಗೆ ನಡೆಸುತ್ತಿದೆ.

ಎಂಟು ದಿನಗಳ ಮಾರಾಟವು 5,500ಕ್ಕೂ ಹೆಚ್ಚು ಬ್ರಾಂಡ್‌ಗಳು ದೊರೆಯಲಿವೆ. ಎಂಎಸ್‌ಎಂಇಗಳು, 'ಮೇಡ್ ಇನ್ ಇಂಡಿಯಾ' ಬ್ರಾಂಡ್‌ಗಳು, ಸರ್ಕಾರದ ಎಂಪೋರಿಯಂಗಳು ಮತ್ತು ಅಂತಾರಾಷ್ಟ್ರೀಯ ಫ್ಯಾಷನ್, ಲೈಫ್​ಸ್ಟೈಲ್​, ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಕ್ಯಾಟಗರಿ ಬ್ರಾಂಡ್‌ಗಳ ಉತ್ಪನ್ನಗಳು ದೊರೆಯಲಿವೆ.

ಇ-ಚಿಲ್ಲರೆ ವ್ಯಾಪಾರಿ ಪ್ಲಾಟ್​ಫಾರ್ಮ್​ ಮೊಬೈಲ್ ಮತ್ತು ಪರಿಕರಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಗೃಹಪಯೋಗಿ ವಸ್ತುಗಳು, ಕಿಚನ್​ ನೀಡ್ಸ್​ ವಸ್ತುಗಳ ಮೇಲೆ ಶೇ 80ರವರೆಗೆ ರಿಯಾಯಿತಿ ನೀಡುತ್ತಿದೆ. ಜೊತೆಗೆ ಎಲ್ಲಾ ಉತ್ಪನ್ನಗಳ ಮೇಲೆ ಶೇ 20ರವರೆಗೆ ಹೆಚ್ಚುವರಿ ಪೇಟಿಎಂ ಕ್ಯಾಶ್‌ಬ್ಯಾಕ್ ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರು ತಮ್ಮ ಖರೀದಿಯಲ್ಲಿ ಹೆಚ್ಚುವರಿ ಶೇ 10ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು.

ABOUT THE AUTHOR

...view details