ನವದೆಹಲಿ: ಇತ್ತೀಚಿನ ದಿನಗಳಲ್ಲಿ ತೆರಿಗೆ ಹೆಚ್ಚಳದಿಂದಾಗಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದರಿಂದ ಕಂಪ್ರೇಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಚಾಲಿತ ವಾಹನಗಳ ಅಳವಡಿಕೆ ಸಹ ಹೆಚ್ಚಾಗಲಿದೆ ಎಂದು ಕ್ರಿಸಿಲ್ ರಿಸರ್ಚ್ ತಿಳಿಸಿದೆ.
ಈ ಹಿಂಂದೆ 2018ರ ಅಕ್ಟೋಬರ್ನಲ್ಲಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80.5 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 80 ರೂ. ದಾಟಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ 55ಕ್ಕೆ ಇಳಿದಿದ್ದರೂ ಸಹ ಬೆಲೆ ಈಗ ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ 85.2 ರೂ.ಗೆ ತಲುಪಿದೆ.
ಹೆಚ್ಚಿನ ಅಬಕಾರಿ ಸುಂಕದಿಂದಾಗಿ ಈ ಹೆಚ್ಚಳವು 2020ರಲ್ಲಿ 13 ರೂ.ನಿಂದ 32.98 ರೂ.ಗೆ ಏರಿದೆ. ಇದರಲ್ಲಿ ಮೌಲ್ಯವರ್ಧಿತ ತೆರಿಗೆಯೂ ಸೇರಿದೆ. ತೆರಿಗೆಯು ಈಗ ಪೆಟ್ರೋಲ್ನ ಚಿಲ್ಲರೆ ಮಾರಾಟದ ಬೆಲೆಯಲ್ಲಿ 60 ಪ್ರತಿಶತದಷ್ಟು ಪಾಲು ಹೊಂದಿದೆ. ಇದು 2019ರಲ್ಲಿ ಶೇ. 47ರಷ್ಟಿತ್ತು ಎಂದು ಕ್ರಿಸಿಲ್ ರಿಸರ್ಚ್ ನಿರ್ದೇಶಕ ಹೆತಾಲ್ ಗಾಂಧಿ ಹೇಳಿದ್ದಾರೆ.
ಸಾರ್ವಜನಿಕ ಖರ್ಚುಗಳನ್ನು ಹೆಚ್ಚಿಸಲು ಸರ್ಕಾರವು ಹಣದ ಮೂಲ ಹುಡುಕಬೇಕಾಗಿದೆ. ಸ್ವಚ್ಛ ಇಂಧನಗಳ ಬಳಕೆಗೆ ಉತ್ತೇಜಿಸುತ್ತಿದ್ದು, ಪೆಟ್ರೋಲ್ ಮೇಲಿನ ತೆರಿಗೆ ಯಾವುದೇ ಯಾವುದೇ ಕಾರಣಕ್ಕೂ ಹಿಂದಿನ ಹಂತಕ್ಕೆ ಇಳಿಯುವ ಸಾಧ್ಯತೆಯಿಲ್ಲ ಎಂದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಅಬಕಾರಿ ಸುಂಕದಿಂದಾಗಿ ಸರ್ಕಾರವು 1.4 ಲಕ್ಷ ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆಯಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಪ್ರಮಾಣವು ಶೇ. 10-16ರಷ್ಟು ಕಡಿಮೆಯಾಗಬಹುದು. ಇದಲ್ಲದೆ 2021ರಲ್ಲಿ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಸರಾಸರಿ 23-5ರಷ್ಟು ಏರಿಕೆಯಾಗಲಿದೆ. 2020ರಲ್ಲಿ ಬ್ಯಾರೆಲ್‌ಗೆ 42.3 ಡಾಲರ್ನಿಂದ 50-55 ಡಾಲರ್ಗೆ ತಲುಪಿತ್ತು. ಅಂದರೆ 2020ರ ಡಿಸೆಂಬರ್ ಸರಾಸರಿ ಮುಕ್ತಾಯದ ಬೆಲೆಗಿಂತ ಶೇ. 4ರಷ್ಟು ಹೆಚ್ಚಳವಾಗಿದೆ.