ಕರ್ನಾಟಕ

karnataka

ETV Bharat / business

2022 ಹಣಕಾಸು ವರ್ಷದಲ್ಲಿ ಜಿಡಿಪಿ 8.7ಕ್ಕೆ ಕುಸಿತ: ಫಿಚ್‌ ರೇಟಿಂಗ್ಸ್‌ ಭವಿಷ್ಯ - ಎಪಿಎಸಿ ಸಾವರಿನ್‌ ಕ್ರೆಡಿಟ್

ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.8.7ಕ್ಕೆ ಆರ್ಥಿಕ ಬೆಳವಣಿಗೆ ಕಡಿತಗೊಳ್ಳಲಿದೆ ಎಂದು ಎಪಿಎಸಿ ಸಾವರಿನ್‌ ಕ್ರೆಡಿಟ್ ಅವಲೋಕನದಲ್ಲಿ ಫಿಚ್ ರೇಟಿಂಗ್ಸ್ ಹೇಳಿದೆ. ಆದರೆ, 2023ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.10 ಕ್ಕೆ ವೃದ್ಧಿಯಾಗಲಿದೆ ಎಂದು ಭವಿಷ್ಯ ನುಡಿದಿದೆ.

Fitch cuts India's FY22 GDP growth forecast to 8.7%
2022 ಹಣಕಾಸು ವರ್ಷದಲ್ಲಿ ಜಿಡಿಪಿ 8.7ಕ್ಕೆ ಕುಸಿತ: ಫಿಚ್‌ ರೇಟಿಂಗ್ಸ್‌ ಭವಿಷ್ಯ

By

Published : Oct 7, 2021, 8:08 PM IST

ನವದಹೆಲಿ: ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ನೀಡಿರುವ ಫಿಚ್ ರೇಟಿಂಗ್‌, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.8.7ಕ್ಕೆ ಆರ್ಥಿಕ ಬೆಳವಣಿಗೆ ಕಡಿತಗೊಳಿಸಿದೆ. ಆದರೆ, 2023ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.10 ಕ್ಕೆ ವೃದ್ಧಿಯಾಗಲಿದೆ. ಕುಸಿತವಾಗಿದ್ದ ಆರ್ಥಿಕ ಚೇತರಿಕೆ ಹಳಿಗೆ ಮರಳು ಕೋವಿಡ್ 2ನೇ ಅಲೆಯಿಂದ ವಿಳಂಬವಾಗಿದೆ ಎಂದು ಹೇಳಿದೆ.

ಎಪಿಎಸಿ ಸಾವರಿನ್‌ ಕ್ರೆಡಿಟ್ ಅವಲೋಕನದಲ್ಲಿ ಫಿಚ್ ರೇಟಿಂಗ್ಸ್, ಭಾರತದ ಬಿಬಿಬಿ/ಋಣಾತ್ಮಕ ಸಾವರಿನ್‌ ರೇಟಿಂಗ್ ಇನ್ನೂ ಬಲವಾದ ಮಧ್ಯಮ ಅವಧಿಯ ಬೆಳವಣಿಗೆಯ ದೃಷ್ಟಿಕೋನವನ್ನು ಹೊಂದಿದೆ. ಹಾಗೂ ಘನ ವಿದೇಶಿ ಮೀಸಲು ಬಫರ್‌ಗಳಿಂದ ಬಾಹ್ಯ ಸ್ಥಿತಿಸ್ಥಾಪಕತ್ವ ಸಮತೋಲನಗೊಳಿಸುತ್ತದೆ. ಹೆಚ್ಚಿನ ಸಾರ್ವಜನಿಕ ಸಾಲ, ದುರ್ಬಲ ಹಣಕಾಸು ವಲಯಗಳಿಂದ ಹಿಂದುಳಿಯಲು ರಚನಾತ್ಮಕ ಅಂಶಗಳಾಗಿವೆ.

ಸಾಂಕ್ರಾಮಿಕ ಆಘಾತದಿಂದಾಗಿ ಭಾರತದ ಸಾರ್ವಜನಿಕ ಹಣಕಾಸು ತೀವ್ರವಾಗಿ ಹದಗೆಟ್ಟ ನಂತರ ಸಾಲದ ಮಾರ್ಗಗಳ ಮೇಲಿನ ಅನಿಶ್ಚಿತತೆಯನ್ನು ನಕಾರಾತ್ಮಕ ದೃಷ್ಟಿಕೋನವು ಪ್ರತಿಬಿಂಬಿಸುತ್ತದೆ ಎಂದು ಫಿಚ್‌ ರೇಟಿಂಗ್ಸ್‌ ಹೇಳಿದೆ. ಕೋವಿಡ್‌ 2ನೇ ಅಲೆಯ ಪರಿಣಾಮವಾಗಿ 2022ರ ಮಾರ್ಚ್ (FY22)ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಜೂನ್‌ನಲ್ಲಿ ಶೇಕಡಾ 10 ರಿಂದ 8.7 ಕ್ಕೆ ಇಳಿಯಲಿದೆ ಎಂದು ಮುನ್ಸೂಚನೆ ನೀಡಿದೆ.

ABOUT THE AUTHOR

...view details