ನವದೆಹಲಿ:ಸ್ಯಾಮ್‌ಸಂಗ್ ಮೊಬೈಲ್ ಕಂಪನಿಯು ಹೊಸ ಎಂ-ಸೀರೀಸ್ ಸ್ಮಾರ್ಟ್‌ಫೋನ್, ಗ್ಯಾಲಕ್ಸಿ ಎಂ 12ಯನ್ನು 48 ಎಂಪಿ ಕ್ವಾಡ್-ಕ್ಯಾಮರಾ ಸೆಟಪ್ ಹಾಗೂ 90 ಹರ್ಟ್ಸ್ ರಿಫ್ರೆಶ್ ರೇಟ್ ಡಿಸ್ಪ್ಲೇ ಫೀಚರ್ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಎರಡು ಮಾದರಿಗಳಲ್ಲಿದ್ದು, 4ಜಿಬಿ ರ್ಯಾಮ್ 64 ಜಿಬಿ ಇಂಟರ್ನಲ್ ಮೆಮೊರಿ ಬೆಲೆ 10,999 ರೂ. ಹಾಗೂ 6ಜಿಬಿ ರ್ಯಾಮ್ 128 ಜಿಬಿ ಮೆಮೊರಿಯ ಮಾಡಲ್ಗೆ 13,499 ರೂ.ಯಷ್ಟಿದೆ.
ಗ್ಯಾಲಕ್ಸಿ ಎಂ ಸರಣಿಯು 2019ರಲ್ಲಿ ಪ್ರಾರಂಭವಾಗಿ ಎರಡು ವರ್ಷ ಪೂರೈಸಿದೆ. ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸರಣಿಯ ಹೊಸ ಸೇರ್ಪಡೆ ಗ್ಯಾಲಕ್ಸಿ ಎಂ 12, ಮಾನ್ಸ್ಟಾರ್ ರೀಲೋಡ್ ಆಗಿದೆ. ಬಳಕೆದಾರರಿಗೆ ಇನ್ನಷ್ಟು ಶಕ್ತಿ ತುಂಬಲು ವಿನ್ಯಾಸಗೊಳಿಸಲಾಗಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ಮಾರ್ಕೆಟಿಂಗ್ ಹಿರಿಯ ನಿರ್ದೇಶಕರಾದ ಆದಿತ್ಯ ಬಬ್ಬರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12ನ ಫೀಚರ್:
6.5-ಇಂಚಿನ ಎಚ್‌ಡಿ (720x1,600 ಪಿಕ್ಸೆಲ್) ಟಿಎಫ್‌ಟಿ ಇನ್ಫಿನಿಟಿ-ವಿ ಡಿಸ್ಪ್ಲೇ 20: 9 ಅನುಪಾತವಿದೆ
ಸ್ಮಾರ್ಟ್‌ಫೋನ್ ಎಕ್ಸಿನೋಸ್ 850 SoCನಿಂದ ನಿಯಂತ್ರಿತವಾಗಿದೆ. 6ಜಿಬಿ ರ್ಯಾಮ್ ತನಕ ಜೋಡಿತವಾಗಿದೆ. ಇಂಟರ್ನಲ್ ಮೆಮೊರಿ 128 ಜಿಬಿವರೆಗೆ ಇರಲಿದೆ.