ಕರ್ನಾಟಕ

karnataka

ETV Bharat / business

ವಿಲೀನ, ಸ್ವಾಧೀನಗಳ ಪ್ರಕ್ರಿಯೆ ಕುಂಠಿತ; 2021ರಲ್ಲಿ ದೇಶಕ್ಕೆ ಶೇ.26ರಷ್ಟು ಎಫ್‌ಡಿಐ ಕಡಿತ

UN report on FDI flows to India: ಭಾರತಕ್ಕೆ ಕಳೆದ ವರ್ಷ ಶೇ.26 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಕಡಿತವಾಗಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಸಂಸ್ಥೆ ಮಾಹಿತಿ ನೀಡಿದೆ. ಇದಕ್ಕೆ ಪ್ರಮುಖ ಕಾರಣ ವಿಲೀನ ಮತ್ತು ಸ್ವಾಧೀನಗಳ ಪ್ರಕ್ರಿಯೆಗಳು ಕಡಿಮೆಯಾಗಿರುವುದು ಎಂದು ಯುಎನ್‌ಸಿಟಿಎಡಿ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

By

Published : Jan 20, 2022, 1:14 PM IST

FDI flows to India slip 26 pc in 2021: UN report
ವಿಲೀನ, ಸ್ವಾಧೀನಗಳ ಪ್ರಕ್ರಿಯೆ ಕುಂಠಿತ; 2021ರಲ್ಲಿ ದೇಶಕ್ಕೆ ಶೇ.26ರಷ್ಟು ಎಫ್‌ಡಿಐ ಕಡಿತ

ವಿಶ್ವಸಂಸ್ಥೆ: ವಿಲೀನ ಮತ್ತು ಸ್ವಾಧೀನಗಳ ಪ್ರಕ್ರಿಯೆಗಳು ನಡೆಯದ ಕಾರಣ 2021ರಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ) ಹರಿವು ಶೇ.26 ರಷ್ಟು ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಸಂಸ್ಥೆ ಹೇಳಿದೆ.

ಈ ಕುರಿತು ಯುಎನ್ ಕಾನ್ಫರೆನ್ಸ್ ಆನ್ ಟ್ರೇಡ್ ಆ್ಯಂಡ್ ಡೆವಲಪ್‌ಮೆಂಟ್ (ಯುಎನ್‌ಸಿಟಿಎಡಿ) ವರದಿ ಪ್ರಕಟಿಸಿದ್ದು, 2021ರಲ್ಲಿ ಜಾಗತಿಕ ವಿದೇಶಿ ನೇರ ಹೂಡಿಕೆಯ ಶೇ.77 ರಷ್ಟು ಹೆಚ್ಚಾಗಿದೆ. 1.65 ಟ್ರಿಲಿಯನ್‌ ಡಾಲರ್‌ನ ವ್ಯವಹಾರವನ್ನು ಅಂದಾಜಿಸಲಾಗಿದೆ. ಈ ಪ್ರಮಾಣ 2020ರಲ್ಲಿ 929 ಬಿಲಿಯಲ್‌ ಡಾಲರ್‌ ನಷ್ಟಿತ್ತು. ಕೋವಿಡ್‌ ಬಳಿಕ ಅಂದರೆ 2020ರಲ್ಲಿ ಇದ್ದ 929 ಬಿಲಿಯನ್‌ ಡಾಲರ್‌ ಜಾಗತಿಕ ಎಫ್‌ಡಿಐ 2021ರಲ್ಲಿ 1.65 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ ಎಂದು ಹೇಳಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೂಡಿಕೆಯ ಹರಿವಿನ ಚೇತರಿಕೆಯು ಉತ್ತೇಜನಕಾರಿಯಾಗಿದೆ. ಆದರೆ ಉತ್ಪಾದನಾ ಸಾಮರ್ಥ್ಯಗಳಿಗೆ ಪ್ರಮುಖವಾದ ಕೈಗಾರಿಕೆಗಳಲ್ಲಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೊಸ ಹೂಡಿಕೆಯ ನಿಶ್ಚಲತೆ, ಪ್ರಮುಖ ಸುಸ್ಥಿರ ಅಭಿವೃದ್ಧಿ ಗುರಿಯ (SDG) ಕ್ಷೇತ್ರಗಳಾದ ವಿದ್ಯುತ್, ಆಹಾರ ಅಥವಾ ಆರೋಗ್ಯ ವಲಯದಲ್ಲಿ ಹೆಚ್ಚಿನ ಸಾಧನೆ ಸಾಧ್ಯವಾಗಿಲ್ಲ ಎಂದು ಯುಎನ್‌ಸಿಟಿಎಡಿ ಪ್ರಧಾನ ಕಾರ್ಯದರ್ಶಿ ರೆಬೆಕಾ ಗ್ರಿನ್‌ಸ್ಪಾನ್‌ ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು 2021 ರಲ್ಲಿ ಅಂದಾಜು 777 ಶತಕೋಟಿ ಡಾಲರ್‌ ತಲುಪುವುದರೊಂದಿಗೆ, 2020 ರಲ್ಲಿ ಅಸಾಧಾರಣವಾದ ಕಡಿಮೆ ಮಟ್ಟಕ್ಕಿಂತ ಮೂರು ಪಟ್ಟು ಹೆಚ್ಚು ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ:ಬ್ರಾಡ್‌ಬ್ಯಾಂಡ್‌ ಸೇವೆಯಲ್ಲಿ BSNL ಹಿಂದಿಕ್ಕಿ ನಂಬರ್‌ 1 ಸ್ಥಾನಕ್ಕೇರಿದ ರಿಲಯನ್ಸ್ ಜಿಯೋ

For All Latest Updates

TAGGED:

ABOUT THE AUTHOR

...view details