ವಾಷಿಂಗ್ಟನ್: ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳ ಅನುಮೋದನೆಯೊಂದಿಗೆ, ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಮುನ್ನೆಲೆಗೆ ತರಲು ದೈತ್ಯ ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ಬುಕ್ ಯೋಜಿಸಿದೆ.
ಕ್ರಿಪ್ಟೋಕರೆನ್ಸಿ ವ್ಯವಹಾರ ಉತ್ತೇಜನಕ್ಕೆ ಫೇಸ್ಬುಕ್, ಲಿಬ್ರಾ ಎಂಬ ವ್ಯವಸ್ಥೆಯನ್ನು ಅನಾವರಣಗೊಳಿಸಿದೆ. ಜಿನೇವಾ ಮೂಲದ ಲಿಬ್ರಾ ಅಸೋಸಿಯೇಷನ್ ಜೊತೆಗೆ ಈಗಾಗಲೇ 28 ಸಂಸ್ಥೆಗಳು ಕೈಜೋಡಿಸಿದೆ. ವೀಸಾ, ಮಾಸ್ಟರ್ ಕಾರ್ಡ್, ಸ್ಪಾಟಿಫೈ, ಉಬರ್, ಇಬೇ, ಪೇಪಾಲ್ ಸೇರಿದಂತೆ ಹಲವಾರು ಕಂಪೆನಿಗಳು ಫೇಸ್ಬುಕ್ನ ಈ ನೂತನ ಯೋಜನೆಗೆ ಬೆಂಬಲ ಸೂಚಿಸಿವೆ.
ಪ್ರಸ್ತುತ 28 ಕಂಪೆನಿಗಳು ಫೇಸ್ಬುಕ್ನ ಹೊಸ ಯೋಜನೆಗೆ ಕೈಜೋಡಿಸಿದ್ದು ಲಿಬ್ರಾ ನಾಣ್ಯ ಮುಂದಿನ ವರ್ಷ ಲಾಂಚ್ ಆಗಲಿದ್ದು, ಆ ವೇಳೆಗೆ ನೂರು ಪಾಲುದಾರರನ್ನು ಹೊಂದುವ ನಿರೀಕ್ಷೆಯಲ್ಲಿದೆ.