‘
ಮುಂಬೈ: ಕೊರೊನಾ ವೈರಸ್ ಭೀತಿಯಿಂದಾಗಿ, ಟ್ರಂಪ್ ಯುರೋಪಿನಿಂದ ಅಮೆರಿಕಕ್ಕೆ ಪ್ರಯಾಣಿಸುವವರಿಗೆ 30 ದಿನಗಳ ನಿಷೇಧವನ್ನು ಘೋಷಿಸಿದ್ದಾರೆ. ಈ ಘೋಷಣೆ ಮಾರುಕಟ್ಟೆಯನ್ನೇ ತಲ್ಲಣಗೊಳಿಸಿದೆ. ವಿಶ್ವಾದ್ಯಂತ ಇಕ್ವಿಟಿ ಸೂಚ್ಯಂಕಗಳು ಕುಸಿಯುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆ(WHO)ಯು ಕೊರೊನಾ ವೈರಸ್ ಅನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿದ ಒಂದು ದಿನದ ಬಳಿಕ ಮತ್ತು ಯುಎಸ್ ಅಧ್ಯಕ್ಷ ಟ್ರಂಪ್ ಕೋವಿಡ್ -19 ಹರಡುವ ಭೀತಿಯಿಂದಾಗಿ ಯುರೋಪಿನಿಂದ ಅಮೆರಿಕಕ್ಕೆ 30 ದಿನಗಳ ಪ್ರಯಾಣ ನಿಷೇಧವನ್ನು ಘೋಷಿಸಿದ ಬಳಿಕ ಗುರುವಾರ ಮುಂಜಾನೆ ಈಕ್ವಿಟಿ ಸೂಚ್ಯಂಕಗಳು ತೀವ್ರ ಕುಸಿತ ಕಂಡಿದೆ.
ರಷ್ಯಾ ಮತ್ತು ಸೌದಿ ಅರೇಬಿಯಾ ಉತ್ಪಾದನೆಯನ್ನು ಹೆಚ್ಚಿಸಿ, ಬೆಲೆ ಕುಸಿತ ಕಂಡಂತೆ ತೈಲ ಬೆಲೆಯೂ ಮತ್ತಷ್ಟು ಕುಸಿದಿದೆ.
ಬೆಳಿಗ್ಗೆ 10 ಗಂಟೆಗೆ BSE S&P ಸೆನ್ಸೆಕ್ಸ್ 2,400 ಪಾಯಿಂಟ್ ( ಒಂದು ಹಂತದಲ್ಲಿ 2700 ಅಂಕ) ಅಥವಾ ಶೇ 5.02 ರಷ್ಟು ಇಳಿಕೆ ಕಂಡು 33,904 ಕ್ಕೆ ತಲುಪಿದ್ದರೆ, ನಿಫ್ಟಿ50, 526 ಪಾಯಿಂಟ್ ಇಳಿಕೆ ಕಂಡು 9,932 ಕ್ಕೆ ಬಂದು ತಲುಪಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿನ ಎಲ್ಲ ವಲಯ ಸೂಚ್ಯಂಕಗಳು, ನಿಫ್ಟಿ ಮೆಟಲ್ ಶೇ. 7.1, ಪಿಎಸ್‌ಯು ಬ್ಯಾಂಕ್ ಶೇ 7, ರಿಯಾಲ್ಟಿ ಶೇ. 6.8 ಮತ್ತು ಆಟೋ ಶೇ, 5.4 ರಷ್ಟು ಇಳಿಕೆಯಾಗಿದೆ.
ಟಾಟಾ ಮೋಟಾರ್ಸ್ ಷೇರುಗಳಲ್ಲಿ ಶೇ. 11 ರಷ್ಟು ಕುಸಿದ ನಂತರ ಪ್ರತಿ ಷೇರಿಗೆ 87.80 ರೂ. ಯೆಸ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರಮವಾಗಿ ಶೇ 9.7 ಮತ್ತು ಶೇ 7.3 ರಷ್ಟು ಕುಸಿತ ಕಂಡಿವೆ.