ಮುಂಬೈ:ಮುಂಬೈ ಷೇರು ಮಾರುಕಟ್ಟೆಯ 1,200 ಪಾಯಿಂಟ್ಗಳಷ್ಟು ಇಳಿಕೆ ಕಂಡಿದ್ದು, ಏಷ್ಯಾದ ಷೇರುಮಾರುಕಟ್ಟೆಯಲ್ಲಿ ತೀವ್ರ ಇಳಿಕೆ ಕಂಡಿದ್ದು, ಕೊರೊನಾ ಸೋಂಕು ಜಗತ್ತಿನಾದ್ಯಂತ ಹರಡುತ್ತಿರುವ ಕಾರಣದಿಂದ ಸೆನ್ಸೆಕ್ಸ್ನಲ್ಲಿ ಇಳಿಕೆ ಕಂಡಿದೆ.
ಇಂದಿನ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ನ ಸೆನ್ಸೆಕ್ಸ್ 28,265ಕ್ಕೆ ಕೊನೆಗೊಂಡಿದೆ. 1,203 ಪಾಯಿಂಟ್ಗಳಷ್ಟು ಅಂದ್ರೆ 4.08ನಷ್ಟು ಇಳಿಕೆ ಕಂಡಿದೆ. ಇದಕ್ಕೂ ಮೊದಲು 29,468.49 ಪಾಯಿಂಟ್ಗಳಿಗೆ ಸೆನ್ಸೆಕ್ಸ್ ಕೊನೆಗೊಂಡಿತ್ತು.
ಇದನ್ನೂ ಓದಿ: ಷೇರುಪೇಟೆಯ ಗೂಳಿಗೆ ಕೊರೊನಾ ಲಗಾಮು, ಕೆಎಂಬಿ, ಎಸ್ಬಿಐ, ಹೆಚ್ಡಿಎಫ್ಸಿ ಬ್ಯಾಂಕುಗಳಿಗೆ ನಷ್ಟ
ನಿಫ್ಟಿ 8,263ರಷ್ಟಿದ್ದು, 334.15 ಅಥವಾ ಶೇಕಡಾ 3.89ರಷ್ಟು ಇಳಿಕೆ ಕಂಡಿದೆ. ಬ್ಯಾಂಕಿಂಗ್ ಹಾಗೂ ಹಣಕಾಸು ಷೇರುಗಳ ಮೇಲೆ ತೀವ್ರ ಒತ್ತಡ ಬಿದ್ದಿದ್ದು ಷೇರುಗಳಲ್ಲಿ ಭಾರೀ ಇಳಿಮುಖವಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ಇಂಡ್ ಬ್ಯಾಂಕ್ಗಳು ನಷ್ಟಕ್ಕೆ ಒಳಗಾಗಿವೆ. ಹೀರೋ ಮೊಟೊಕಾರ್ಪ್, ಬಜಾಜ್ ಆಟೋಗಳು ಚೇತರಿಕೆ ಕಂಡಿವೆ