ಕರ್ನಾಟಕ

karnataka

ETV Bharat / business

ಚುನಾವಣೆ ಫಲಿತಾಂಶಗಳು ತಂದ ಹರ್ಷ: ಮುಂಬೈಷೇರು ಪೇಟೆ 400 ಅಂಕಗಳ ಏರಿಕೆ - ಇಕ್ವಿಟಿ ಸೂಚ್ಯಂಕ

ಇಕ್ವಿಟಿ ಸೂಚ್ಯಂಕಗಳು ಹಸಿರು ಬಣ್ಣದಿಂದ ಪ್ರಾರಂಭಗೊಳ್ಳುವ ಮೂಲಕ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​​ ಹಾಗೂ ನಿಫ್ಟಿ ಪಾಯಿಂಟ್​​ಗಳಲ್ಲಿ ಏರಿಕೆ ಕಂಡು ಬಂದಿದೆ.

Representative Image
ಸಂಗ್ರಹ ಚಿತ್ರ

By

Published : Nov 10, 2020, 12:23 PM IST

ಮುಂಬೈ(ಮಹಾರಾಷ್ಟ್ರ): ಷೇರು ಮಾರುಕಟ್ಟೆಯ ಇಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಇಂದು ಹಸಿರು ಬಣ್ಣದಿಂದ ಪ್ರಾರಂಭಗೊಂಡಿದ್ದು, ಸೆನ್ಸೆಕ್ಸ್​​ನಲ್ಲಿ 400 ಹೆಚ್ಚು ಅಂಕಗಳ ಏರಿಕೆ ದಾಖಲಿಸಿದೆ. ನಿಫ್ಟಿ ಸಹ 107 ಅಂಕಗಳ ಏರಿಕೆ ದಾಖಲಿಸಿದೆ.

ಇಂದು ಬೆಳಿಗ್ಗೆ 9:18 ಸಮಯಕ್ಕೆ ಬಿಎಸ್‌ಇಎಸ್&ಪಿ ಸೆನ್ಸೆಕ್ಸ್ 132.22 ಪಾಯಿಂಟ್ ಅಥವಾ 0.31 ರಷ್ಟು ಏರಿಕೆ ಕಂಡು 42,729.65 ಕ್ಕೆ ತಲುಪಿದ್ದರೆ, ನಿಫ್ಟಿ 36.40 ರಿಂದ 50 ಪಾಯಿಂಟ್ ಅಥವಾ 0.29 ರಷ್ಟು ಏರಿಕೆಗೊಂಡು 12,497.45 ಕ್ಕೆ ಏರಿಕೆ ದಾಖಲಿಸಿತ್ತು. ಅದು ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್​​ 432 ಅಂಕ ಏರಿಕೆಯೊಂದಿಗೆ 43 ಸಾವಿರವನ್ನ ದಾಟಿ ಮುನ್ನುಗ್ಗುತ್ತಿದೆ.ಇನ್ನು ರಾಷ್ಟ್ರೀಯ ಷೇರುಪೇಟೆ 12570 ಅಂಕಗಳಿಗೆ ತಲುಪಿ, ಹೂಡಿಕೆದಾರರ ಜೇಬು ತುಂಬಿಸಿತು.

ಅಮೆರಿಕ ಚುನಾವಣಾ ಫಲಿತಾಂಶ, ಕೋವಿಡ್​ಗೆ ಲಸಿಕೆ ಹಾಗೂ ಬಿಹಾರ ಚುನಾವಣೆ ಫಲಿತಾಂಶ ಷೇರುಪೇಟೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details