ಮುಂಬೈ: ದೇಶದ ಷೇರುಪೇಟೆಯಲ್ಲಿ ಗೂಳಿಯ ಓಟ ಮುಂದುವರಿದ್ದು, ದಿನದ ಆರಂಭದಲ್ಲೇ 302 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ 57,854ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 79 ಅಂಕಗಳ ಜಿಗಿತದೊಂದಿಗೆ 17,212ರಲ್ಲಿತ್ತು.
ಸಂವೇದಿ ಸೂಚ್ಯಂಕಗಳ ಏರಿಕೆಯ ಹಿನ್ನೆಲೆಯಲ್ಲಿ ಖಾಸಗಿ ಬ್ಯಾಂಕ್‌ಗಳು ಷೇರು ಮೌಲ್ಯ 1.5 ರಷ್ಟು ಹಾಗೂ ಪಿಎಸ್‌ಯು ಬ್ಯಾಂಕ್ 1 ರಷ್ಟು ಹೆಚ್ಚಳವಾಗಿದೆ. ಅಕ್ಸೀಸ್ ಬ್ಯಾಂಕ್‌ನ 3.6 ರಷ್ಟು ಷೇರು ಮೌಲ್ಯ ಹೆಚ್ಚಿಸಿಕೊಂಡು 1 ಷೇರು 815 ರೂಪಾಯಿಗೆ ಮಾರಾಟ ಆಗುತ್ತಿದೆ. ಇಂಡಸ್ ಇಂಡ್ ಬ್ಯಾಂಕ್ 2.6, ಐಸಿಐಸಿಐ ಬ್ಯಾಂಕ್ 1.8, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 1 ರಷ್ಟು ಷೇರು ಮೌಲ್ಯ ಹೆಚ್ಚಿಸಿಕೊಂಡವು.