ಕರ್ನಾಟಕ

karnataka

ETV Bharat / business

ಡಿಸೆಂಬರ್​ನಲ್ಲಿ ಎಂಟು ಪ್ರಮುಖ ಕೈಗಾರಿಕಾ ಕ್ಷೇತ್ರಗಳ ಉತ್ಪಾದನೆ ಶೇ.1.3ರಷ್ಟು ಕುಸಿತ..

ಕಲ್ಲಿದ್ದಲು ಮತ್ತು ವಿದ್ಯುತ್ ಹೊರತುಪಡಿಸಿ ಎಲ್ಲಾ ವಲಯಗಳು ಡಿಸೆಂಬರ್ 2020ರಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿವೆ. ಏಪ್ರಿಲ್-ಡಿಸೆಂಬರ್ 2020-21ರ ಅವಧಿಯಲ್ಲಿ ಕ್ಷೇತ್ರಗಳ ಉತ್ಪಾದನೆಯು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ.0.6ರಷ್ಟು ಬೆಳವಣಿಗೆಯ ದರಕ್ಕೆ ಹೋಲಿಸಿದರೆ ಶೇ.10.1ರಷ್ಟು ಕುಸಿದಿದೆ..

output
output

By

Published : Jan 29, 2021, 7:55 PM IST

ನವದೆಹಲಿ :ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ರಸಗೊಬ್ಬರ, ಉಕ್ಕು ಮತ್ತು ಸಿಮೆಂಟ್ ಕ್ಷೇತ್ರಗಳಿಂದ ಕಳಪೆ ಪ್ರದರ್ಶನದಿಂದಾಗಿ 2020ರ ಡಿಸೆಂಬರ್‌ನಲ್ಲಿ ಎಂಟು ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳ ಉತ್ಪಾದನೆಯು ಶೇ.1.3ರಷ್ಟು ಕುಸಿದಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಎಂಟು ಪ್ರಮುಖ ವಲಯಗಳ ಉತ್ಪಾದನೆಯು 2019ರ ಡಿಸೆಂಬರ್‌ನಲ್ಲಿ ಶೇ. 3.1ರಷ್ಟು ವಿಸ್ತರಣೆಯಾಗಿದೆ.

ಕಲ್ಲಿದ್ದಲು ಮತ್ತು ವಿದ್ಯುತ್ ಹೊರತುಪಡಿಸಿ ಎಲ್ಲಾ ವಲಯಗಳು ಡಿಸೆಂಬರ್ 2020ರಲ್ಲಿ ನಕಾರಾತ್ಮಕ ಬೆಳವಣಿಗೆ ದಾಖಲಿಸಿವೆ. ಏಪ್ರಿಲ್-ಡಿಸೆಂಬರ್ 2020-21ರ ಅವಧಿಯಲ್ಲಿ ಕ್ಷೇತ್ರಗಳ ಉತ್ಪಾದನೆಯು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ.0.6ರಷ್ಟು ಬೆಳವಣಿಗೆಯ ದರಕ್ಕೆ ಹೋಲಿಸಿದ್ರೆ ಶೇ. 10.1ರಷ್ಟು ಕುಸಿದಿದೆ.

ಇದನ್ನೂ ಓದಿ: ಹರಿಯಾಣದ 17 ಜಿಲ್ಲೆಗಳಲ್ಲಿ ಜ. 30ರ ಸಂಜೆ 5ರವರೆಗೆ ಇಂಟರ್ನೆಟ್ ಬಂದ್​​!

ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ರಸಗೊಬ್ಬರ, ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಯು ಕ್ರಮವಾಗಿ ಶೇ. 3.6, 7.2, 2.8, 2.9, 2.7, ಮತ್ತು ಶೇ. 9.7ರಷ್ಟು ಕುಸಿದಿವೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಎಂಟು ಪ್ರಮುಖ ಕೈಗಾರಿಕೆಗಳು ಶೇ.40.27ರಷ್ಟಿದೆ.

ABOUT THE AUTHOR

...view details