ಕರ್ನಾಟಕ

karnataka

ETV Bharat / business

ಇ - ವಾಹನಗಳು: ನೋಂದಣಿ, ನವೀಕರಣ ಶುಲ್ಕ ವಿನಾಯಿತಿಗೆ ಪ್ರಸ್ತಾಪಿಸಿದ ಸರ್ಕಾರ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2021ರ ಮೇ 27ರಂದು ಕರಡು ಅಧಿಸೂಚನೆ ಹೊರಡಿಸಿದ್ದು, ಕೇಂದ್ರ ಮೋಟಾರು ವಾಹನ ನಿಯಮಗಳು, 1989 ಅನ್ನು ತಿದ್ದುಪಡಿ ಮಾಡಲು, ಆರ್‌ಸಿ ವಿತರಣೆ ಅಥವಾ ನವೀಕರಣ ಮತ್ತು ನಿಯೋಜನೆಗಾಗಿ ಬಿಒವಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವ ಪ್ರಸ್ತಾಪಿಸಿದೆ ಎಂದು ಹೇಳಿದೆ.

By

Published : Jun 1, 2021, 3:06 PM IST

E-vehicles
E-vehicles

ನವದೆಹಲಿ:ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬ್ಯಾಟರಿ ಚಾಲಿತ ವಾಹನಗಳನ್ನು (ಬಿಒವಿ) ಶುಲ್ಕ ಪಾವತಿಸುವುದರಿಂದ ಅಥವಾ ನೋಂದಣಿ ಪ್ರಮಾಣಪತ್ರ (ಆರ್‌ಸಿ) ನವೀಕರಣದಿಂದ ವಿನಾಯಿತಿ ನೀಡುವ ಪ್ರಸ್ತಾಪ ರೂಪಿಸಿದೆ.

ಈ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳ ಅವಧಿಯಲ್ಲಿ ಸಾರ್ವಜನಿಕರಿಂದ ಮತ್ತು ಎಲ್ಲ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಗಳನ್ನು ಕೋರಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2021ರ ಮೇ 27ರಂದು ಕರಡು ಅಧಿಸೂಚನೆ ಹೊರಡಿಸಿದ್ದು, ಕೇಂದ್ರ ಮೋಟಾರು ವಾಹನ ನಿಯಮಗಳು, 1989 ಅನ್ನು ತಿದ್ದುಪಡಿ ಮಾಡಲು, ಆರ್‌ಸಿ ವಿತರಣೆ ಅಥವಾ ನವೀಕರಣ ಮತ್ತು ನಿಯೋಜನೆಗಾಗಿ ಬಿಒವಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವ ಪ್ರಸ್ತಾಪಿಸಿದೆ ಎಂದು ಹೇಳಿದೆ.

ABOUT THE AUTHOR

...view details