ಕರ್ನಾಟಕ

karnataka

ETV Bharat / business

2020 ಬಂದರೂ ವಾಹನೋದ್ಯಮ ಸ್ಲೋ.. ಬೈಕ್​ ಮಾರಾಟ ಶೇ. 16ರಷ್ಟು ಕುಸಿತ!

ಮೋಟಾರ್​​ ಸೈಕಲ್​ ಬೆಳವಣಿಗೆ ದರವು 2020ರ ಜನವರಿಯಲ್ಲಿ ಸಹ ಶೇ. 15.17ರಷ್ಟು ಇಳಿಕೆಯಾಗಿದೆ.8,71,886 ವಾಹನಗಳು ಮಾರಾಟ ಆಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 10,27,766 ವಾಹನಗಳು ಮಾರಾಟ ಆಗಿದ್ದವು. ಒಟ್ಟಾರೆ ದ್ವಿಚಕ್ರ ವಾಹನ ಮಾರಾಟವು ಶೇ.16.06ರಷ್ಟು ಕ್ಷೀಣಿಸಿದೆ. ಈ ಹಿಂದಿನ ವರ್ಷದಲ್ಲಿ 15,97,528 ಯೂನಿಟ್​ಗಳಿಗೆ ಪ್ರತಿಯಾಗಿ 13,41,005 ವಾಹನಗಳು ಮಾರಾಟ ಆಗಿವೆ ಎಂದು ಭಾರತೀಯ ವಾಹನ ಮಾರಾಟ ಸಂಘಟನೆ ತಿಳಿಸಿದೆ.

By

Published : Feb 10, 2020, 5:11 PM IST

Two Wheeler
ದ್ವಿಚಕ್ರ

ನವದೆಹಲಿ: ಜನವರಿ ಮಾಸಿಕದಲ್ಲಿ ದೇಶಿಯ ವಾಹನ ಮಾರಾಟವು ಶೇ. 6.2ರಷ್ಟು ಕುಸಿತವಾಗಿದೆ ಎಂದು ಭಾರತೀಯ ವಾಹನ ಮಾರಾಟ ಸಂಘಟನೆ (ಸಿಯಾಮ್​) ತಿಳಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 2,80,091 ವಾಹನಗಳು ಮಾರಾಟ ಆಗಿದ್ದರೇ ಈ ವರ್ಷ ಅವುಗಳ ಮಾರಾಟದ ಪ್ರಮಾಣ 262,714 ಯೂನಿಟ್​ಗೆ ತಲುಪಿದೆ ಎಂದು ಹೇಳಿದೆ.

ಕಾರುಗಳ ಮಾರಾಟದಲ್ಲಿ ಸಹ ಇಳಿಕೆ ಕಂಡು ಬಂದಿದೆ. ಶೇ 8.1ರಷ್ಟು ಬೆಳವಣಿಗೆ ಕ್ಷೀಣಿಸಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ 1,79,324 ಯೂನಿಟ್​ಗಳು ಮಾರಾಟ ಆಗಿದ್ದರೇ 1,64,793 ಯೂನಿಟ್​ಗಳು 2020 ಜನವರಿಯಲ್ಲಿ ಮಾರಾಟ ಕಂಡಿವೆ ಎಂದು ಸಿಯಾಮ್​ ಇತ್ತೀಚಿನ ದತ್ತಾಂಶಗಳ ಮೂಲಕ ತಿಳಿಸಿದೆ.

ಮೋಟಾರ್​​ ಸೈಕಲ್​ ಬೆಳವಣಿಗೆ​ ದರ ಸಹ ಶೇ. 15.17ರಷ್ಟು ಇಳಿಕೆ ಕಂಡಿದೆ. 8,71,886 ವಾಹನಗಳು ಮಾರಾಟ ಆಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 10,27,766 ವಾಹನಗಳು ಮಾರಾಟ ಆಗಿದ್ದವು. ದ್ವಿಚಕ್ರ ವಾಹನ ಮಾರಾಟವು ಶೇ. 16.06ರಷ್ಟು ಕ್ಷೀಣಿಸಿದೆ. ಈ ಹಿಂದಿನ ವರ್ಷದಲ್ಲಿ 15,97,528 ಯೂನಿಟ್​ಗಳಿಗೆ ಪ್ರತಿಯಾಗಿ 13,41,005 ವಾಹನಗಳು ಮಾರಾಟ ಆಗಿವೆ ಎಂದಿದೆ.

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ. 14.04ರಷ್ಟು ಕುಸಿತ ಕಂಡು ಬಂದಿದೆ. 75,289 ಯೂನಿಟ್​ಗಳು ಮಾರಾಟ ಆಗಿವೆ ಎಂದು ಸಿಯಾಮ್ ತಿಳಿಸಿದೆ.

ABOUT THE AUTHOR

...view details