ಮುಂಬೈ: ದೇಶದಲ್ಲಿ ಸತತ ಮೂರನೇ ದಿನವೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು ಕೂಡ ಲೀಟರ್‌ಗೆ 20 ಪೈಸೆ ಕಡಿಮೆಯಾಗಿದೆ. ಕಳೆದ 35 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ವಾಹನ ಸವಾರರಿಗೆ ಗುಡ್‌ನ್ಯೂಸ್: ಸತತ ಮೂರನೇ ದಿನವೂ ಡೀಸೆಲ್ ದರ ಇಳಿಕೆ - ಇಂದಿನ ಡೀಸೆಲ್ ಬೆಲೆ
ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದು ದೇಶದಲ್ಲಿ ಸತತ ಮೂರನೇ ದಿನವೂ ಡೀಸೆಲ್ ಲೀಟರ್ ಬೆಲೆ 20 ಪೈಸೆಯಷ್ಟು ಇಳಿಕೆಯಾಗಿದೆ. ಕಳೆದ 35 ದಿನಗಳಿಂದ ಪೆಟ್ರೋಲ್ ಯಥಾಸ್ಥಿತಿ ಕಾಯ್ದುಕೊಂಡಿದೆ.
ವಾಹನ ಸವಾರರಿಗೆ ಗುಡ್‌ನ್ಯೂಸ್; ಸತತ ಮೂರನೇ ದಿನವೂ ಡೀಸೆಲ್ ಲೀಟರ್‌ಗೆ 20 ಪೈಸೆ ಕಡಿತ
ಪ್ರತಿ ಲೀಟರ್‌ಗೆ 20 ಪೈಸೆ ಕಡಿತದ ಬಳಿಕ ಮುಂಬೈನಲ್ಲಿ ಲೀಟರ್ ಡೀಸೆಲ್ 96.84 ಪೈಸೆಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಕಳೆದ 3 ದಿನಗಳಿಂದ ಡೀಸೆಲ್ ಲೀಟರ್‌ಗೆ 55 ಪೈಸೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ಬೆಲೆ 94.65 ಪೈಸೆ ಇದೆ.
ಆಗಸ್ಟ್ 18 ಹಾಗೂ 19 ರಂದು ಡೀಸೆಲ್ ಬೆಲೆಯಲ್ಲಿ ತಲಾ 20 ಪೈಸೆ ಇಳಿಕೆ ಮಾಡಲಾಗಿತ್ತು. ಜುಲೈ 17 ರಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 101.84 ರೂಪಾಯಿಯಲ್ಲೇ ಕಳೆದ 35 ದಿನಗಳಿಂದ ಮಾರಾಟ ಆಗುತ್ತಿದೆ.