ಕರ್ನಾಟಕ

karnataka

ETV Bharat / business

ಸತತ 2ನೇ ದಿನವೂ ಕುಸಿದ ಡೀಸೆಲ್ ದರ: ಬೆಂಗಳೂರಲ್ಲಿ ಬೆಲೆ ಎಷ್ಟು ಗೊತ್ತೇ? - ಇಂದಿನ ಡೀಸೆಲ್ ಬೆಲೆ

ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 70.46 ರೂ.ಗಳಾಗಿದ್ದು, ಗುರುವಾರ 70.53 ರೂ.ಗಳಲ್ಲಿ ಮಾರಾಟ ಆಗುತ್ತಿತ್ತು. ಇತರ ಮಹಾ ನಗರಗಳಾದ ಮುಂಬೈ, ಚೆನ್ನೈ, ಕೋಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಇಂಧನ ದರ ಕ್ರಮವಾಗಿ ಲೀಟರ್‌ಗೆ 76.86, 75.95, 73.99 ಹಾಗೂ 74.63 ರೂ.ಗಳಿಗೆ ಮಾರಾಟ ಆಗುತ್ತಿದೆ.

Fuel
ಇಂಧನ

By

Published : Oct 2, 2020, 3:08 PM IST

ನವದೆಹಲಿ: ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಸತತ ಎರಡನೇ ದಿನವೂ ಡೀಸೆಲ್ ಬೆಲೆ ಕುಸಿದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 70.46 ರೂ.ಗಳಾಗಿದ್ದು, ಗುರುವಾರ 70.53 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಇತರ ಮಹಾನಗರಗಳಾದ ಮುಂಬೈ, ಚೆನ್ನೈ, ಕೋಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಇಂಧನ ದರ ಕ್ರಮವಾಗಿ ಲೀಟರ್‌ಗೆ 76.86, 75.95, 73.99 ಹಾಗೂ 74.63 ರೂ.ಗಳಿಗೆ ಮಾರಾಟ ಆಗುತ್ತಿದೆ. ಹಿಂದಿನ ದಿನ 76.93, 76.01, 74.05 ಹಾಗೂ 74.81 ರೂ.ಯಲ್ಲಿ ಖರೀದಿ ಆಗುತ್ತಿತ್ತು.

ಕಚ್ಚಾ ತೈಲ ಬೆಲೆಗಳ ಮೃದುವಾಗುತ್ತಿದ್ದಂತೆ ಡೀಸೆಲ್‌ನ ಚಿಲ್ಲರೆ ಬೆಲೆಯ ಕುಸಿತ ಮುಂದುವರಿದಿದೆ. ಇಂಟರ್ ಕಾಂಟಿನೆಂಟಲ್ ಎಕ್ಸ್​ಚೇಂಜ್​ನಲ್ಲಿ (ಐಸಿಇ) ಬ್ರೆಂಟ್ ಕಚ್ಚಾ ಡಿಸೆಂಬರ್ ಒಪ್ಪಂದವು ಪ್ರತಿ ಬ್ಯಾರೆಲ್​ಗೆ 39.95 ಡಾಲರ್​​ನಂತೆ ವಹಿವಾಟು ನಡೆಸುತ್ತಿದ್ದು, ಇದು ಶೇ 2.39ರಷ್ಟು ಕುಸಿತವಾಗಿದೆ.

ಪೆಟ್ರೋಲ್ ಬೆಲೆಗಳು ಸತತ 10ನೇ ದಿನವೂ ಮಹಾನಗರಗಳಲ್ಲಿ ಬದಲಾಗದೇ ಯಥಾಸ್ಥಿತಿಯಲ್ಲಿದೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಬೆಲೆ ಕ್ರಮವಾಗಿ 81.06, 87.74, 84.14, 82.59 ಮತ್ತು 83.69 ರೂ.ಯಷ್ಟಿದೆ.

ABOUT THE AUTHOR

...view details