ಕರ್ನಾಟಕ

karnataka

ETV Bharat / business

30 ದಿನದಿಂದ ಒಂದೇ -1 ಪೈಸೆ ಏರಿಕೆಯಾಗದ ಡೀಸೆಲ್​: ಮೋದಿ ಪೂರೈಸಿದ್ರಾ ತಮ್ಮ ಪ್ರಾಮಿಸ್​? - ದೀರ್ಘಾವಧಿಯ ಡೀಸೆಲ್​ ಬೆಲೆ ಸ್ಥಿರ

ಭಾರತದ ಒಎಂಸಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯನ್ನು ಈಗ ಒಂದು ತಿಂಗಳಿನಿಂದ ಒಂದೇ ದರದಲ್ಲಿ ಉಳಿಸಿಕೊಂಡು ಬಂದಿವೆ. ಸೋಮವಾರವೂ ಎರಡೂ ಪೆಟ್ರೋಲ್ ಉತ್ಪನ್ನಗಳ ಬೆಲೆ ಬದಲಾಗದೇ ಯಥಾವತ್ತಾಗಿದೆ. ಇದರೊಂದಿಗೆ ಪೆಟ್ರೋಲ್ ಬೆಲೆ ಈಗ 41 ದಿನಗಳಿಂದ ಬದಲಾಗದೇ ಇದ್ದರೇ ಡೀಸೆಲ್ ಬೆಲೆ ಅಕ್ಟೋಬರ್ 2ರ ಮಟ್ಟದಲ್ಲಿಯೇ ಮುಂದುವರೆಯುತ್ತಿದೆ.

Fuel
ಇಂಧನ

By

Published : Nov 2, 2020, 3:54 PM IST

ನವದೆಹಲಿ: ದೇಶಾದ್ಯಂತ ಚಿಲ್ಲರೆ ದರದಲ್ಲಿ ಯಾವುದೇ ಪರಿಷ್ಕರಣೆ ಕಾಣದ ಡೀಸೆಲ್ ಸೋಮವಾರಕ್ಕೆ ಒಂದು ಪೂರ್ಣ ತಿಂಗಳು ಪೂರ್ಣಗೊಳಿಸಿದೆ.

ಸರಿಯಾಗಿ ಅಕ್ಟೋಬರ್ 2ರ ಹಿಂದೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಯಿತು. ಅಂದಿನಿಂದ ತೈಲ ಮಾರುಕಟ್ಟೆಯ ಕಂಪನಿಗಳು ಬೆಲೆಯನ್ನು ಸ್ಥಿರವಾಗಿ ಉಳಿಸಿಕೊಂಡು ಬಂದಿವೆ.

ಸೆಪ್ಟೆಂಬರ್​ಗೆ ಹೋಲಿಸಿದರೆ ಸರಾಸರಿ ಅಂತಾರಾಷ್ಟ್ರೀಯ ಕಚ್ಚಾ ಬೆಲೆಗಳು ಅಕ್ಟೋಬರ್​​ನಲ್ಲಿ ಬ್ಯಾರೆಲ್​ಗೆ ಕೇವಲ1 ಡಾಲರ್​ನಷ್ಟು ಹೆಚ್ಚಾಗಿದೆ. ಒಟ್ಟಾರೆ ದರ 40 ಡಾಲರ್​ನಷ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ದರಗಳಲ್ಲಿ ಬದಲಾವಣೆ ನೀಡುವ ಸಣ್ಣ ಬದಲಾವಣೆ ಕಂಡು ಬಂದಿದೆ ಎಂದು ಇಂಡಿಯನ್ ಆಯಿಲ್ ಅಧ್ಯಕ್ಷ ಎಸ್.ಎಂ. ವೈದ್ಯ ಹೇಳಿದ್ದಾರೆ.

ಭಾರತದ ಒಎಂಸಿ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯನ್ನು ಈಗ ಒಂದು ತಿಂಗಳಿನಿಂದ ಒಂದೇ ದರದಲ್ಲಿ ಉಳಿಸಿಕೊಂಡು ಬಂದಿವೆ. ಸೋಮವಾರವೂ ಎರಡೂ ಪೆಟ್ರೋಲ್ ಉತ್ಪನ್ನಗಳ ಬೆಲೆ ಬದಲಾಗದೇ ಯಥಾವತ್ತಾಗಿದೆ. ಇದರೊಂದಿಗೆ ಪೆಟ್ರೋಲ್ ಬೆಲೆ ಈಗ 41 ದಿನಗಳಿಂದ ಬದಲಾಗದೇ ಇದ್ದರೇ ಡೀಸೆಲ್ ಬೆಲೆ ಅಕ್ಟೋಬರ್ 2ರ ಮಟ್ಟದಲ್ಲಿಯೇ ಮುಂದುವರೆಯುತ್ತಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 81.06 ರೂ. ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಕ್ರಮವಾಗಿ ಲೀಟರ್‌ಗೆ 87.74, 84.14 ಮತ್ತು 82.59 ರೂ.ಗಳಿಗೆ ಮಾರಾಟ ಆಗುತ್ತಿದೆ.

ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಕ್ರಮವಾಗಿ 70.46, 76.86, 75.95 ಮತ್ತು 73.99 ರೂ.ಯಷ್ಟಿದೆ. ಜಾಗತಿಕ ತೈಲ ಬೆಲೆಗಳ ಬಗ್ಗೆ ಹೊಸ ಸೂಚನೆಗಳೊಂದಿಗೆ ದೇಶೀಯ ತೈಲ ಕಂಪನಿಗಳು ಚಿಲ್ಲರೆ ಬೆಲೆ ಕೆಳಕ್ಕೆ ಪರಿಷ್ಕರಿಸಬಹುದು. ದೇಶದಲ್ಲಿ ತೈಲ ಬೇಡಿಕೆಯು ಇತ್ತೀಚೆಗೆ ಹೆಚ್ಚಾಗಿದೆ.

ಜಾಗತಿಕ ಕಚ್ಚಾ ಬೆಲೆಗಳು ಈಗಾಗಲೇ ವಾರದಲ್ಲಿ ಶೇ 10ಕ್ಕಿಂತಲೂ ಕಡಿಮೆಯಾಗಿದೆ. ತೈಲವು ಈಗ ಬ್ಯಾರೆಲ್‌ಗೆ 38 ಡಾಲರ್​​ಕ್ಕಿಂತಲೂ ಹೆಚ್ಚು ಮಾರಾಟವಾಗುತ್ತಿದೆ. ಆದರೆ, ಕಡಿಮೆ ತೈಲ ಬೇಡಿಕೆ ಮತ್ತು ಹೆಚ್ಚುತ್ತಿರುವ ದಾಸ್ತಾನುಗಳ ಜತೆಗೆ ತೈಲ ಉತ್ಪಾದಿಸುವ ಕಂಪನಿಗಳಲ್ಲಿ ಕಚ್ಚಾ ಇಂಧನ ಮತ್ತೆ ಇಳಿಯಬಹುದು ಎಂಬ ಭಯವಿದೆ.

ABOUT THE AUTHOR

...view details