ನವದೆಹಲಿ:ಡೆಲ್ ತನ್ನ ‘ಲ್ಯಾಟಿಟ್ಯೂಡ್ 7410 ಕ್ರೋಮ್ಬುಕ್ ಎಂಟರ್ಪ್ರೈಸ್’ ಹೆಸರಿನ ದೀರ್ಘ ಕಾಲ ಬಳಸಬಹುದಾದ ಬ್ಯಾಟರಿ ಲ್ಯಾಪ್ಟಾಪ್ ಅನ್ನು ಆಯ್ದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ.
ಈ ಲ್ಯಾಪ್ಟಾಪ್ ದರ 1,299 ಡಾಲರ್ನಿಂದ ಆಯ್ದ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ 1,099 ಡಾಲರ್ ಬೆಲೆಯಲ್ಲಿ ಇಂಟೆಲ್ ಕೋರ್ ಐ 3 ಪ್ರೊಸೆಸರ್ಗಳೊಂದಿಗೆ ಲಭ್ಯವಾಗಲಿದೆ. ಭಾರತದಲ್ಲಿ ಹೊಸ ಸಾಧನದ ಬೆಲೆ ಮತ್ತು ಲಭ್ಯತೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ.
ನಮ್ಮ ಇತ್ತೀಚಿನ ಲ್ಯಾಟಿಟ್ಯೂಡ್ ಕ್ರೋಮ್ಬುಕ್ ಎಂಟರ್ಪ್ರೈಸ್ ಅನ್ನು ಉದ್ಯೋಗಿಗಳಿಗೆ ಮತ್ತು ಉದ್ಯಮದಲ್ಲಿ ಕ್ರೋಮ್ ಒಎಸ್ ಅಳವಡಿಸಿಕೊಳ್ಳುವ ಐಟಿ ವ್ಯವಸ್ಥಾಪಕರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಡೆಲ್ ಟೆಕ್ನಾಲಜೀಸ್ನ ವಾಣಿಜ್ಯ ಉತ್ಪನ್ನ ಸಮೂಹದ ಹಿರಿಯ ಉಪಾಧ್ಯಕ್ಷ ರಾಹುಲ್ ಟಿಕೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲ್ಯಾಟಿಟ್ಯೂಡ್ 7410 ಕ್ರೋಮ್ಬುಕ್ ನಯವಾದ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಈ ಉತ್ಪನ್ನ ಒಳಗೊಂಡಿದೆ. ಐಟಿ ವ್ಯವಸ್ಥಾಪಕರ ಕಾರ್ಪೊರೇಟ್ ವಾತಾವರಣಗಳನ್ನು ಗಮನದಲ್ಲಿ ಇರಿಸಿಕೊಂಡು ಸಾಧನವನ್ನು ವಿನ್ಯಾಸಗೊಳಿಸಲಾಗಿದೆ. ನಿರ್ವಹಣೆ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಗೂಗಲ್ ಶೀಟ್ಗಳಲ್ಲಿ 8.6 ಪಟ್ಟು ವೇಗವಾಗಿ ಕೆಲಸ ಮಾಡುವಂತಹ ಬ್ಯಾಂಡ್ವಿಡ್ತ್ ಚಟುವಟಿಕೆ ಹೊಂದಿದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಲ್ಯಾಟಿಟ್ಯೂಡ್ 7410 ಕ್ರೋಮ್ಬುಕ್ ಎಂಟರ್ಪ್ರೈಸ್ ಎಲ್ಟಿಇ ಮೊಬೈಲ್ ಬ್ರಾಡ್ಬ್ಯಾಂಡ್, ಇಂಟೆಲ್ ವೈಫೈ 6 ಮತ್ತು 10ನೇ ಜನರೇಷನ್ ವೈಶಿಷ್ಟ್ಯತೆ, ಇಂಟೆಲ್ ಕೋರ್ ಐ 7 ಪ್ರೊಸೆಸರ್ ಫೀಚರ್ ಇದರಲ್ಲಿದೆ.
ಲ್ಯಾಟಿಟ್ಯೂಡ್ 7410 ಕ್ರೋಮ್ಬುಕ್ ಕಂಪನಿಯ ಪ್ರಕಾರ, ಲ್ಯಾಪ್ಟಾಪ್ 21 ಗಂಟೆಗಳ ದೀರ್ಘ ಕಾಲ ಬ್ಯಾಟರಿ ಅವಧಿ ಹೊಂದಿದೆ. 20 ನಿಮಿಷಗಳಲ್ಲಿ 0- 35 ಪ್ರತಿಶತ ತ್ವರಿತವಾಗಿ ಚಾರ್ಜ್ ಮಾಡಬಹುದು. ಒಂದು ಗಂಟೆಯಲ್ಲಿ ಶೇ 80ರಷ್ಟು ಚಾರ್ಜ್ ಪಡೆಯಬಹುದು ಟ್ವೀಟ್ ಮಾಡಿದೆ.