ನವದೆಹಲಿ:ಸದಾ ಗಿಜಿಗಿಡುತ್ತಿದ್ದ ದೇಶದ ಏರ್ ಟ್ರಾಫಿಕ್ ಆರು ವರ್ಷಗಳ ಬಳಿಕ ತೀವ್ರ ಪ್ರಮಾಣದಲ್ಲಿ ಕ್ಷೀಣಿಸಿದ್ದು, ಮಾರ್ಚ್ ತಿಂಗಳ ಅವಧಿಯಲ್ಲಿ ವಾಯುಯಾನ ನಕಾರಾತ್ಮಕ ಹಾದಿಯಲ್ಲಿ ಸಾಗಿದೆ.
ಭಾರತೀಯ ವಿಮಾನಯಾನ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, 2019ರ ಮಾರ್ಚ್ನಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಕೆ ಕಂಡಿದೆ. 2018ರ ಮಾರ್ಚ್ ತಿಂಗಳಲ್ಲಿ 2.85 ಕೋಟಿ ಪ್ರಯಾಣಿಕರು ವಿಮಾನಯಾನ ಸೇವೆ ಪಡೆದಿದ್ದರು. ಆದರೆ, 2019ರ ಈ ವೇಳೆ 2.81 ಕೋಟಿ ಜನರು ಪ್ರಯಾಣಿಸಿದ್ದಾರೆ.
ದೇಶದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಅತ್ಯಧಿಕ ಏರ್ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ, 2019ರ ಮಾರ್ಚ್ನಲ್ಲಿ 54.84 ಲಕ್ಷ ಪ್ರಯಾಣಿಕರು ಸಂಚರಿಸಿದ್ದರೆ, 2018ರಲ್ಲಿ 60.4 ಲಕ್ಷ ವಿಮಾನಯಾನ ಸೇವೆ ಪಡೆದಿದ್ದು, ಶೇ 9.4ರಷ್ಟು ಪ್ರಯಾಣಿಕರ ದಟ್ಟಣೆ ಕುಸಿದಿದೆ. ಮುಂಬೈ- ಶೇ 16.2, ಚೆನ್ನೈ- ಶೇ 7.4 ಹಾಗೂ ಕೊಚ್ಚಿನ್ ಶೇ 11.3ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.
2019ರ ಮಾರ್ಚ್ನ ಇಯರ್ ಆನ್ ಇಯರ್ಗೆ (ಕಳೆದ ವರ್ಷಕ್ಕೆ ಹೋಲಿಸಿದರೆ) ಹೋಲಿಸಿದರೆ 2013ರ ಫೆಬ್ರವರಿಯಲ್ಲಿ ಕನಿಷ್ಠ ಮಟ್ಟದ ಏರ್ ಟ್ರಾಫಿಕ್ ಉಂಟಾಗಿತ್ತು. ಆದರೆ, ಈ ವರ್ಷಗಳ ಅವಧಿಯಲ್ಲಿ ಪ್ರಯಾಣಿಕರ ವಿಮಾನಯಾನ ಸೇವಾ ಬೆಳವಣಿಗೆ ಪ್ರಮಾಣ ಹೆಚ್ಚಳವಾಗಿದೆ.
ಇಥಿಯೋಪಿಯಾದಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನದ ಬಳಿಕ ಸುರಕ್ಷತೆ ದೃಷ್ಟಿಯಿಂದ ಹಾರಾಟ ಸ್ಥಗಿತವಾಗಿತ್ತು. ತೀವ್ರ ಹಣಕಾಸು ಮುಗ್ಗಟ್ಟಿನಿಂದ 124 ವಿಮಾನಗಳ ಹಾರಾಟ ಹಿಂತೆಗೆದುಕೊಂಡ ಜೆಟ್ ಏರ್ವೇಸ್ ಸೇರಿದಂತೆ ಇತರೆ ಕಾರಣಗಳು ಏರ್ ಟ್ರಾಫಿಕ್ ಕಡಿಮೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.