ಕರ್ನಾಟಕ

karnataka

ETV Bharat / business

ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಸಂಸ್ಥೆ ವಝಿರ್‌ಎಕ್ಸ್‌ ವ್ಯವಹಾರ; 40.5 ಕೋಟಿ ರೂ.ಜಿಎಸ್‌ಟಿ ವಂಚನೆ - ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಸಂಸ್ಥೆ ವಝಿರ್‌ಎಕ್ಸ್‌ಗೆ ದಂಡ

ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ವಝಿರ್‌ಎಕ್ಸ್‌ ಸಂಸ್ಥೆ ವಹಿವಾಟಿನಲ್ಲಿ ಕಮಿಷನ್‌ ಹಾಗೂ ಇತರ ಶುಲ್ಕಗಳ ರೂಪದಲ್ಲಿ ಪಡೆದಿರುವ ಹಣಕ್ಕೆ ಜಿಎಸ್‌ಟಿ ಪಾವತಿ ಮಾಡದಿರುವುದನ್ನು ಜಿಎಸ್‌ಟಿ ಅಧಿಕಾರಿಗಳು ಪತ್ತೆ ಹಚ್ಚಿಸಿದ್ದಾರೆ. ವಝಿರ್‌ಎಕ್ಸ್‌ನ 40.5 ಕೋಟಿ ರೂಪಾಯಿಗಳ ಜಿಎಸ್‌ಟಿ ವಂಚನೆ ಮಾಡಿದ್ದು, ಬಡ್ಡಿ ಹಾಗೂ ದಂಡದ ರೂಪದಲ್ಲಿ ಈ ಸಂಸ್ಥೆಯಿಂದ 49.2 ಕೋಟಿ ರೂ.ವಸೂಲಿ ಮಾಡಲಾಗಿದೆ.

Cryptocurrency exchange WazirX fined Rs 49.20 crore for GST evasion
ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಸಂಸ್ಥೆ ವಝಿರ್‌ಎಕ್ಸ್‌ನಲ್ಲಿ ವ್ಯವಹಾರ; 40.5 ಕೋಟಿ ರೂ.ಜಿಎಸ್‌ಟಿ ವಂಚನೆ

By

Published : Jan 1, 2022, 10:24 AM IST

ನವದೆಹಲಿ: ಮುಂಬೈನ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ವಝಿರ್‌ಎಕ್ಸ್‌ನ ವ್ಯವಹಾರದಲ್ಲಿ 40.5 ಕೋಟಿ ರೂಪಾಯಿಗಳ ಜಿಎಸ್‌ಟಿ ವಂಚನೆಯನ್ನು ಪತ್ತೆ ಮಾಡಿರುವುದಾಗಿ ಜಿಎಸ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ವಝಿರ್‌ಎಕ್ಸ್‌ 40.5 ಕೋಟಿ ರೂ. ಜಿಎಸ್‌ಟಿ ಪಾವತಿಸಿಲ್ಲ. ಬಡ್ಡಿ ಮತ್ತು ದಂಡದ ಜೊತೆಗೆ ಕಳೆದ ವರ್ಷದ ಡಿ.30 ರಂದು ಈ ಸಂಸ್ಥೆಯಿಂದ ಒಟ್ಟು 49.2 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಜಿಎಸ್‌ಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಝಿರ್‌ಎಕ್ಸ್‌ ವಿನಿಮಯವನ್ನು ಝನ್‌ಮೈ ಲ್ಯಾಬ್ಸ್‌ ಪ್ರೈವೇಟ್‌ ಲಿಮಿಟೆಡ್‌ ನಿರ್ವಹಿಸುತ್ತದೆ. ಕ್ರಿಪ್ಟೊಕರೆನ್ಸಿ ಡಬ್ಲ್ಯೂಆರ್‌ಎಕ್ಸ್‌ ಅನ್ನು ಬಿನಾನ್ಸ್‌ ಇನ್ವೆಸ್ಟ್‌ಮೆಂಟ್‌ ಕಂಪನಿ ನಿರ್ವಹಿಸುತ್ತಿದೆ.

ಡಬ್ಲ್ಯೂಆರ್‌ಎಕ್ಸ್‌ನಲ್ಲಿ ವಹಿವಾಟು ಮಾಡಲು ಆಯ್ಕೆಯನ್ನು ಒದಗಿಸುತ್ತದೆ. ಈ ಕರೆನ್ಸಿಯನ್ನು ವಝಿರ್‌ಎಕ್ಸ್‌ ಪ್ಲಾಟ್‌ಫಾರ್ಮ್‌ನಿಂದ ಖರೀದಿಸಬೇಕು. ಕಂಪನಿಯು ಕ್ರಿಪ್ಟೋಕರೆನ್ಸಿಯಲ್ಲಿ ಪ್ರತಿ ವಹಿವಾಟಿನ ಮೇಲೆ ಖರೀದಿದಾರ ಮತ್ತು ಮಾರಾಟಗಾರರಿಂದ ಕಮಿಷನ್‌ ಪಡೆಯುತ್ತಿತ್ತು. ಆದರೆ, ಸರ್ಕಾರಕ್ಕೆ ತೆರಿಗೆ ಪಾವತಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳು ಎರಡೂ ವಹಿವಾಟುಗಳಿಗೆ ಕಮಿಷನ್ ದರ ವಿಭಿನ್ನವಾಗಿರುವುದನ್ನು ಕಂಡು ಹಿಡಿದಿದ್ದಾರೆ. ರೂಪಾಯಿಯಲ್ಲಿನ ವಹಿವಾಟು ಶೇ.0.2 ರಷ್ಟು ಕಮಿಷನ್ ಪಡೆಯುತ್ತದೆ. ಡಬ್ಲ್ಯೂಆರ್‌ಎಕ್ಸ್‌ ವಹಿವಾಟಿಗೆ ಶೇ. 0.1 ಕಮಿಷನ್ ಪಡೆಯಲಾಗುತ್ತದೆ. ಈ ಕಂಪನಿಯು ವ್ಯಾಪಾರ ಶುಲ್ಕ, ಠೇವಣಿ ಶುಲ್ಕ ಹಾಗೂ ಹೂಡಿಕೆ ಹಿಂಪಡೆಯುವ ಶುಲ್ಕವಾಗಿ ಹೆಚ್ಚಿನ ಆದಾಯ ಸಂಗ್ರಹಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಂಪನಿಯು ರೂಪಾಯಿಯಲ್ಲಿ ಗಳಿಸಿದ ಕಮಿಷನ್‌ಗೆ ಮಾತ್ರ ಜಿಎಸ್‌ಟಿ ಪಾವತಿಸುತ್ತಿದೆ. ಆದರೆ, ಡಬ್ಲ್ಯುಆರ್‌ಎಕ್ಸ್‌ನಲ್ಲಿ ಗಳಿಸಿದ ಕಮಿಷನ್‌ಗೆ ಜಿಎಸ್‌ಟಿ ಪಾವತಿಸುತ್ತಿಲ್ಲ. ಈ ವಹಿವಾಟು ಶುಲ್ಕದ ಮೇಲೆ ಶೇ.18 ರ ದರದಲ್ಲಿ ಜಿಎಸ್‌ಟಿ ಅನ್ವಯಿಸುತ್ತದೆ.

ಇದನ್ನೂ ಓದಿ:ಜವಳಿ ಮೇಲಿನ ಜಿಎಸ್‌ಟಿ ದರ ಶೇ.5ರಲ್ಲೇ ಮುಂದುವರಿಸಲು ನಿರ್ಧಾರ.. ಸಚಿವೆ ನಿರ್ಮಲಾ ಸೀತಾರಾಮನ್‌

ABOUT THE AUTHOR

...view details