ಕರ್ನಾಟಕ

karnataka

ETV Bharat / business

ಹೆಚ್ಚುವರಿ ಉತ್ಪಾದನೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದ ತೈಲ ದರ - undefined

ಸಾಗರೋತ್ತರ ಇಂಧನ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರದಲ್ಲಿ 9 ರೂ. ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ ₹ 4,268 ರಲ್ಲಿ ವಹಿವಾಟು ನಡೆಯುತ್ತಿದೆ.

ಸಂಗ್ರಹ ಚಿತ್ರ: ಗೆಟ್ಟಿ

By

Published : May 3, 2019, 4:21 PM IST

Updated : May 3, 2019, 5:23 PM IST

ನವದೆಹಲಿ:ಜಾಗತಿಕ ಆರ್ಥಿಕ ಕುಸಿತ ಹಾಗೂ ಅಗತ್ಯಕ್ಕಿಂತ ಹೆಚ್ಚುವರಿ ಕಚ್ಚಾ ತೈಲ ಉತ್ಪಾದನೆ ಸೇರಿದಂತೆ ಇತರ ಕಾರಣಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕೊಂಚ ಕುಸಿದಿದೆ.

ಸಾಗರೋತ್ತರ ಇಂಧನ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರದಲ್ಲಿ 9 ರೂ. ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ₹ 4,268ರಲ್ಲಿ ವಹಿವಾಟು ನಡೆಯುತ್ತಿದೆ.

ಬ್ರೆಂಟ್ ಕಚ್ಚಾ ತೈಲವು ಕಳೆದ ಆರು ತಿಂಗಳಲ್ಲಿ ಅತ್ಯಧಿಕ ಬೆಲೆ ಏರಿಕೆ ಕಂಡಿದ್ದು (ಬ್ಯಾರೆಲ್​ಗೆ 75.60 ಡಾಲರ್​) ಇಂದು ಪ್ರತಿ ಬ್ಯಾರೆಲ್​ಗೆ 70.29 ಡಾಲರ್​ನಲ್ಲಿ ವಹಿವಾಟು ನಡೆಸಿತು. ಬ್ರೆಂಟ್​ ಕಚ್ಚಾ ತೈಲ ದರದಲ್ಲಿ ಶೇ 0.65ರಷ್ಟು ಇಳಿಕೆ ಕಂಡಿದೆ.

ಬಹು ಸರಕು ವಿನಿಮಯ ಒಪ್ಪಂದದ ಮೇಲೆ ಮೇ ಮಾಸಿಕದಲ್ಲಿ ಕಚ್ಚಾ ತೈಲವನ್ನು ₹ 9 ಅಥವಾ ಶೇ 0.21 ಕಡಿಮೆ ದರದಲ್ಲಿ ವಿತರಿಸಲಾಗಿದೆ. ಒಟ್ಟು 20,606 ಬ್ಯಾರೆಲ್​ಗಳು ₹ 4,268ಕ್ಕೆ ಮಾರಾಟವಾಗಿವೆ.

Last Updated : May 3, 2019, 5:23 PM IST

For All Latest Updates

TAGGED:

ABOUT THE AUTHOR

...view details