ನವದೆಹಲಿ:ಮಾರ್ಚ್ 1ರಿಂದ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟು ಕೊಮೊರ್ಬಿಡಿಟಿ (ಒಂದಕ್ಕಿಂತ ಹೆಚ್ಚು ಕಾಯಿಲೆ) ಹೊಂದಿರುವ 10,000 ಸರ್ಕಾರಿ ಮತ್ತು 20,000ಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳಿಗೆ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಸರ್ಕಾರ ಗುರುತುಪಡಿಸಿ ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಪಡೆಯಲು ಬಯಸುವವರು ಪಾವತಿಸಬೇಕಾಗುತ್ತದೆ ಎಂದರು.
ಖಾಸಗಿ ಆಸ್ಪತ್ರೆಗೆ ತೆರಳುವವರು ಪಾವತಿಸಬೇಕಾದ ಮೊತ್ತವನ್ನು ಆರೋಗ್ಯ ಸಚಿವಾಲಯವು 3 - 4 ದಿನಗಳಲ್ಲಿ ನಿರ್ಧರಿಸುತ್ತದೆ. ಈ ಬಗ್ಗೆ ತಯಾರಕರು ಮತ್ತು ಆಸ್ಪತ್ರೆಗಳೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ಹೇಳಿದರು.
27 ಕೋಟಿಗೂ ಅಧಿಕ ಜನಸಂಖ್ಯೆಗೆ ಸರಿದೂಗಿಸಲು ಸರ್ಕಾರವು ಖಾಸಗಿ ಸಂಸ್ಥೆಗಳ ಜತೆ ತೊಡಗಿಸಬಹುದು ಎಂದು ಊಹಾಪೋಹಗಳು ಹರಿದಾಡುತ್ತಿವೆ. ಆದರೂ ಜಾವಡೇಕರ್ ಅಂತಹ ಯಾವುದೇ ವಿವರಗಳನ್ನು ಬಹಿರಂಗಪಡಿಸಲಿಲ್ಲ.
ಮುಂದಿನ ಹಂತದ ವ್ಯಾಕ್ಸಿನೇಷನ್‌ನಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ ದೊಡ್ಡ ಪ್ರಮಾಣದಲ್ಲಿ ನಡೆಯಲಿದೆ ಎಂದು ನೀತಿ ಆಯೋಗ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪೌಲ್ ಇತ್ತೀಚೆಗೆ ಹೇಳಿದ್ದರು. ಈವರೆಗೆ ಒಟ್ಟು 1,19,07,392 ಲಸಿಕೆ ನೀಡಲಾಗಿದೆ. ಅದರಲ್ಲಿ 1,61,840 ಜನರಿಗೆ ಮಂಗಳವಾರ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಮಧ್ಯಮ-ಉನ್ನತ ಶ್ರೇಣಿಯ ಗೃಹ ಸಾಲ ಬೇಡಿಕೆ ಏರಿಕೆ : ಲೈಟ್ ಶೈನಿಂಗ್ನತ್ತ ರಿಯಲ್ ಎಸ್ಟೇಟ್!
ಆದ್ಯತೆಯ ಗುಂಪುಗಳಿಂದ ಮೊದಲು 30 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶ ಕೇಂದ್ರ ಹೊಂದಿದೆ. ಈ 30 ಕೋಟಿ ಭಾರತೀಯರು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. 1 ಕೋಟಿ ಆರೋಗ್ಯ ಪೂರೈಕೆದಾರರು, 2 ಕೋಟಿ ಮುಂಚೂಣಿ ಕಾರ್ಮಿಕರು, 50 ವರ್ಷಕ್ಕಿಂತ ಮೇಲ್ಪಟ್ಟ 27 ಕೋಟಿ ಜನರು ಹಾಗೂ 50 ವರ್ಷದೊಳಗಿನ ಅಸ್ವಸ್ಥತೆ ಹೊಂದಿದವರು.