ನವದೆಹಲಿ :ಜನವರಿ 16ರಿಂದ ಪ್ರಾರಂಭವಾಗಲಿರುವ ವ್ಯಾಕ್ಸಿನೇಷನ್ ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಮತ್ತು ಮುಂಚೂಣಿ ವಾರಿಯರ್ಸ್ ಗೆ ಚುಚ್ಚುಮದ್ದು ನೀಡಲು ಎಸ್‌ಐಐ ಮತ್ತು ಭಾರತ್ ಬಯೋಟೆಕ್‌ನಿಂದ 6 ಕೋಟಿಗೂ ಅಧಿಕ ಪ್ರಮಾಣದ ಕೋವಿಡ್ ಲಸಿಕೆಯ ಡೋಸ್ ಗಳಿಗಾಗಿ ಸರ್ಕಾರ ಆದೇಶ ನೀಡಿದೆ.
ಭಾರತ್ ಬಯೋಟೆಕ್‌ಗೆ 162 ಕೋಟಿ ರೂ. ವೆಚ್ಚದ 55 ಲಕ್ಷ ಡೋಸ್‌ಗಳಿಗೆ ಸರ್ಕಾರ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ. ಸೆರೆಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ (ಎಸ್‌ಐಐ) 1.1 ಕೋಟಿ ಡೋಸ್ ಆಕ್ಸ್‌ಫರ್ಡ್ ಕೋವಿಡ್ -19 ಕೋವಿಶಿಲ್ಡ್ ಖರೀದಿಸಲಿದೆ.
ಜಿಎಸ್‌ಟಿ ಸೇರಿದಂತೆ 210 ರೂ. ದರಕ್ಕೆ ಏಪ್ರಿಲ್ ವೇಳೆಗೆ 4.5 ಕೋಟಿ ಡೋಸ್ ಖರೀದಿಸಲಿದೆ. ಇದಕ್ಕಾಗಿ 1,100 ಕೋಟಿ ರೂ. ನೀಡಲಿದೆ. 6 ಕೋಟಿಗೂ ಅಧಿಕ ಡೋಸ್‌ಗಳಿಗೆ ಕೇಂದಗ್ರ 1,300 ಕೋಟಿ ರೂ. ಖರ್ಚು ಮಾಡುತ್ತಿದೆ.