ಹೈದರಾಬಾದ್: ನಲ್ಗೊಂಡ ಜಿಲ್ಲೆಯಲ್ಲಿ ಈ ಬಾರಿ ಹತ್ತಿ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದ್ದು, ಬೆಂಬಲ ಬೆಲೆಗಿಂತ 2 ಸಾವಿರ ರೂಪಾಯಿ ಹೆಚ್ಚು ನೀಡಲಾಗುತ್ತಿರುವುದು ಹತ್ತಿ ಬೆಳಗಾರರಲ್ಲಿ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆಯನ್ನು ಹಲವರು ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತಿಗೆ ಭಾರಿ ಬೇಡಿಕೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿರುವುದೇ ಹತ್ತಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಈ ವರ್ಷ ಇಳುವರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ರೈತರು ಎಕರೆಗೆ 10 ಕ್ವಿಂಟಾಲ್ ಹತ್ತಿ ಬೆಳೆಯುತ್ತಿದ್ದರು. ಆದರೆ ಈ ವರ್ಷ ಅದು 5 ಕ್ವಿಂಟಲ್‌ಗೆ ಇಳಿದಿದೆ. ಹತ್ತಿ ಬೆಂಬಲ ಬೆಲೆಯಾಗಿ 6,025 ರೂಪಾಯಿ ನೀಡಲಾಗುತ್ತಿದೆ. ವಾಸ್ತವವಾಗಿ ಸಿಸಿಐ ಖರೀದಿಸುವ ಸರಕುಗಳು ಶೇಕಡಾ 8 ರಿಂದ 12 ರಷ್ಟು ತೇವಾಂಶವನ್ನು ಹೊಂದಿರಬೇಕು. ಆದರೆ, ವರ್ತಕರು ಮತ್ತು ದಲ್ಲಾಳಿಗಳು ಶೇ.20 ತೇವಾಂಶವಿರುವ ಹತ್ತಿಗೆ 7,700 ರೂಪಾಯಿ ನೀಡಿದರೆ ಕೆಲವು ಗಿರಣಿಗಳು 7,900 ರೂಪಾಯಿ ಕೊಟ್ಟು ಖರೀದಿಸುತ್ತಿವೆ.