ಬೆಂಗಳೂರು: ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಜತೆಗೆ ಸಿಲಿಂಡರ್ ದರ ಏರಿಕೆ ಆಗುತ್ತಿದ್ದು, ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾಸ್ತ್ರ ಮುಂದುವರೆಸಿದೆ.
ಮಿತ್ರೋಂ.. ಭಾಯಿಯೊ ಔರ್ ಭೆಹನೋ... ಗ್ಯಾಸ್ ಸಿಲಿಂಡರ್ ಬೆಲೆ ಮತ್ತೊಮ್ಮೆ 25 ರೂ. ಏರಿಕೆಯಾಗಿದೆ. ಸಿರಿವಂತರ ಕಪ್ಪು ಹಣ ತರುತ್ತೇನೆಂದು ಹೇಳಿದ್ದ ನರೇಂದ್ರ ಮೋದಿ ಅವರು ಬಡವರ ಮನೆಯ ಸಾಸಿವೆ ಡಬ್ಬಿಯ ಚಿಲ್ಲರೆ ಹಣವನ್ನು ದೋಚುತ್ತಿದ್ದಾರೆ! ನೀವು ಹೇಳುತ್ತಿದ್ದ ಅಚ್ಛೆ ದಿನ್ ಇದೇನಾ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರ ಬದ್ಧತೆಯಿಂದ 'ಪ್ರೇರಿತ' ಎಂದ ಭಾರತ್ ಬಯೋಟೆಕ್
ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಮತ್ತೊಮ್ಮೆ ಏರಿಕೆಯಾಗಿದೆ. ಜನರಿಗೆ, ಇದು ಮೋದಿ ಸರ್ಕಾರದ ಪರ್ಯಾಯ ವ್ಯವಹಾರಗಳನ್ನು ಕಟ್ಟಿಕೊಳ್ಳಿ, ಅಡುಗೆ ಒಲೆಗಳನ್ನು ಎಸೆಯಿರಿ ಮತ್ತು ಜುಮ್ಲಾಗಳನ್ನು ತಿನ್ನಿ (ಸುಳ್ಳು ಭರವಸೆಗಳು) ಎಂದು ಕೇರಳದ ವಯನಾಡಿನ ವರ್ಷದ ಸಂಸದ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕಂಪನಿಗಳು ಅಡುಗೆ ಅನಿಲದ ಸಿಲಿಂಡರ್ ಮೇಲೆ 25 ರೂ. ಮತ್ತು ವಾಣಿಜ್ಯ ಸಿಲಿಂಡರ್‌ಗೆ 95 ರೂ.ಯಷ್ಟು ಹೆಚ್ಚಿಸಿದ್ದು, ಪರಿಷ್ಕೃತ ಬೆಲೆ ಇಂದಿನಿಂದ ಜಾರಿಗೆ ಬರಲಿವೆ. ಇತ್ತೀಚಿನ ಬೆಲೆ ಏರಿಕೆಯ ನಂತರ, 14.2 ಕೆ.ಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 794 ರೂ. ಇದ್ದದ್ದು 819 ರೂ.ಗೆ ಲಭ್ಯವಾಗುತ್ತಿದೆ.