ಕರ್ನಾಟಕ

karnataka

ETV Bharat / business

ಪೆಟ್ರೋಲ್ ದರ ಹೆಚ್ಚಿಸಿ ಮೋದಿ 19 ಲಕ್ಷ ಕೋಟಿ ರೂ. ಲೂಟಿ ಮಾಡಿದ್ದಾರೆ: ಕಾಂಗ್ರೆಸ್ ಟೀಕೆ - ಇಂದಿನ ಪೆಟ್ರೋಲ್ ದರ

ಗುರುವಾರದಂದು ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಲೀಟರ್​ ಪೆಟ್ರೋಲ್ ಬೆಲೆ 84.20 ರೂ.ಗೆ ತಲುಪಿದೆ. 2018ರ ಅಕ್ಟೋಬರ್ 4 ರಂದು ಚಿಲ್ಲರೆ ಬೆಲೆ ಲೀಟರ್‌ಗೆ 84 ರೂ. ಆಗಿದ್ದು ಇದುವರೆಗಿನ ಗರಿಷ್ಠ ಏರಿಕೆ ಆಗಿತ್ತು.

fuel prices
ಇಂಧನ

By

Published : Jan 7, 2021, 4:21 PM IST

ನವದೆಹಲಿ:ಇಂಧನ ಬೆಲೆಗಳು ಗಗನಕ್ಕೇರುತ್ತಿರುವುದನ್ನು ಖಂಡಿಸಿರುವ ಕಾಂಗ್ರೆಸ್, ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇಂಧನಗಳ ಮೇಲೆ ವಿಧಿಸಿರುವ ತೆರಿಗೆಯಿಂದ 19 ಲಕ್ಷ ಕೋಟಿ ಹಣವನ್ನು ಸಾರ್ವಜನಿಕರ ಜೇಬಿನಿಂದ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದೆ.

ಗುರುವಾರದಂದು ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಲೀಟರ್​ ಪೆಟ್ರೋಲ್ ಬೆಲೆ 84.20 ರೂ.ಗೆ ತಲುಪಿದೆ. 2018ರ ಅಕ್ಟೋಬರ್ 4 ರಂದು ಚಿಲ್ಲರೆ ಬೆಲೆ ಲೀಟರ್‌ಗೆ 84 ರೂ. ಆಗಿದ್ದು ಇದುವರೆಗಿನ ಗರಿಷ್ಠ ಏರಿಕೆ ಆಗಿತ್ತು.

ಇಂಧನ ದರ ಏರಿಕೆ ಬಗ್ಗೆ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. 'ಮೋದಿ ಸರ್ಕಾರ 2014ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿತ್ತು. ನಂತರ ಸಿಲಿಂಡರ್ ಸಬ್ಸಿಡಿ ₹ 412 ಆಗಿದ್ದು, ಅದನ್ನು ಮೋದಿ ಸರ್ಕಾರ ₹ 694ಕ್ಕೆ ಹೆಚ್ಚಿಸಿದೆ. ಈ ಮೂಲಕ ಪ್ರತಿ ಸಿಲಿಂಡರ್‌ಗೆ 282 ರೂ. ಹೆಚ್ಚಳ ಮಾಡಿದೆ' ಎಂದರು.

ಇದನ್ನೂ ಓದಿ: ಪೇಟಿಎಂನಲ್ಲಿ 2 ನಿಮಿಷದೊಳಗೆ 2 ಲಕ್ಷ ರೂ. ತನಕ ಸಾಲ: ದಾಖಲಾತಿ​, ಮರುಪಾವತಿ ವಿವರ ಹೀಗಿದೆ...

ಈ ಭಾರಿ ಹೆಚ್ಚಳವನ್ನು ಮೋದಿ ಸರ್ಕಾರ ರಹಸ್ಯವಾಗಿ ಜಾರಿಗೆ ತಂದಿರುವುದು ಆಶ್ಚರ್ಯಕರವಾಗಿದೆ. ಇದು ಪೆಟ್ರೋಲ್-ಡೀಸೆಲ್-ಅನಿಲ ಬೆಲೆಯಲ್ಲಿ ಲೂಟಿ ಆಟವಾಗಿದೆ. ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಭರವಸೆ ನೀಡುವ ಮೂಲಕ ಅಧಿಕಾರವನ್ನು ಆಕ್ರಮಿಸಿಕೊಂಡಿದ್ದ ಮೋದಿ ಸರ್ಕಾರವು ಕಳೆದ 6.5 ವರ್ಷಗಳಲ್ಲಿ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಇದು ಲೂಟಿಯ ಆಟ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿ ಸರ್ಕಾರ 2014ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿತು. ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಲೀಟರ್​ ಮೇಲೆ ಕ್ರಮವಾಗಿ ₹ 9.20 ಮತ್ತು 3.46 ಆಗಿತ್ತು. ಇದರಲ್ಲಿ ಮೋದಿ ಸರ್ಕಾರ ಪೆಟ್ರೋಲ್‌ಗೆ ₹ 23.78 ಶೇ 258ರಷ್ಟು ಮತ್ತು ಡೀಸೆಲ್ ಮೇಲೆ 28.37 ಶೇ 820ರಷ್ಟು ಸಂಗ್ರಹಿಸಿದೆ. 19,00,000 ಕೋಟಿ ರೂ. ಹಣವನ್ನು ಸಾರ್ವಜನಿಕ ಜೇಬಿನಿಂದ ಲೂಟಿ ಮಾಡಲಾಗಿದೆ. ಇದೊಂದು ಲೂಟಿಯ ಆಟ ಎಂದಿದ್ದಾರೆ.

2014ರ ಮೇ 26ರಂದು ಮೋದಿ ಅಧಿಕಾರ ವಹಿಸಿಕೊಂಡಾಗ ಕಚ್ಚಾ ತೈಲವು ಪ್ರತಿ ಬ್ಯಾರಲ್​ಗೆ 108 ಡಾಲರ್​ ಅಂದರೆ 6,330 ರೂ. ಆಗಿತ್ತು. ಇದು ಈಗ ಬ್ಯಾರೆಲ್​ಗೆ 50.96 ಡಾಲರ್​, ಅಂದರೆ 3,725.92 ರೂ. ಆಗಿದೆ. ಆ ಸಮಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ₹ 71.41 ಮತ್ತು ₹ 55.49 ಆಗಿತ್ತು. ಇಂದು ₹ 84.20 ಮತ್ತು ₹ 74.38 ಯಷ್ಟಾಗಿದೆ. ಇದು ಲೂಟಿಯ ಆಟ ಎಂದು ಟೀಕಿಸಿದ್ದಾರೆ.

ABOUT THE AUTHOR

...view details