ಮುಂಬೈ :ಭಾರತದ ಸ್ಟಾಕ್ ಮಾರುಕಟ್ಟೆ ಶುಕ್ರವಾರದ ವಹಿವಾಟಿನಂದು ಸೆನ್ಸೆಕ್ಸ್ 674 ಅಂಶಗಳಷ್ಟು ಇಳಿಕೆ ಕಂಡಿದೆ. ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿತರ ಹಾಗೂ ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದರಿಂದ ಏಷ್ಯಾದ ಮಾರುಕಟ್ಟೆಗಳು ಇಳಿಕೆ ಕಂಡು ಬಂದವು. ಮುಂಬೈ ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 674.36 ಅಂಶಗಳಷ್ಟು ಇಳಿಕೆ ಕಂಡು 27,590.5 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿತು.
ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದಾಗಿ ಕುಸಿದ ಸೆನ್ಸೆಕ್ಸ್.. - ನಿಫ್ಟಿ
ಮುಂಬೈ ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 674.36 ಅಂಶಗಳಷ್ಟು ಇಳಿಕೆ ಕಂಡು 27,590.5 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿತು.
![ಏರುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯಿಂದಾಗಿ ಕುಸಿದ ಸೆನ್ಸೆಕ್ಸ್.. Nifty](https://etvbharatimages.akamaized.net/etvbharat/prod-images/768-512-6647169-238-6647169-1585910798014.jpg)
ನಿಫ್ಟಿ
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 170 ಅಂಶಗಳು (ಶೇ-2.06ರಷ್ಟು) ಅಂಕಗಳು ಇಳಿಕೆಯಾಗಿ 8,083 ಅಂಶಗಳ ಮಟ್ಟದಲ್ಲಿ ಕೊನೆಗೊಂಡಿತು. ಬ್ಯಾಂಕಿಂಗ್, ಹಣಕಾಸು ಹಾಗೂ ಉಕ್ಕು ವಲಯದ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡು ಬಂತು.