ಕರ್ನಾಟಕ

karnataka

ETV Bharat / business

ಚೀನಾ-ಅಮೆರಿಕ ವಾಣಿಜ್ಯ ಯುದ್ಧ... ಡ್ರ್ಯಾಗನ್​ ಕರೆನ್ಸಿ 11 ವರ್ಷದಲ್ಲೇ ಮಹಾಕುಸಿತ..!

ಸೋಮವಾರದ ವಹಿವಾಟಿನಲ್ಲಿ ಚೀನಾ ಕರೆನ್ಸಿ ಯುವಾನ್​ ಶೇ.0.6ರಷ್ಟು ಕುಸಿತ ಕಂಡು ಡಾಲರ್ ಎದುರು 7.1396ಕ್ಕೆ ವ್ಯವಹಾರ ನಡೆಸಿದೆ.

ಕರೆನ್ಸಿ

By

Published : Aug 26, 2019, 9:29 AM IST

ಶಾಂಘೈ:ಚೀನಾ ಹಾಗೂ ಅಮೆರಿಕ ವಾಣಿಜ್ಯ ಯುದ್ಧ ಸದ್ಯ ಚೀನಾ ದೇಶದ ಕರೆನ್ಸಿಗೆ ಬಲವಾಗಿ ತಟ್ಟಿದ ಪರಿಣಾಮ ದಶಕದಲ್ಲೇ ಅತಿದೊಡ್ಡ ಕುಸಿತ ಕಂಡಿದೆ.

ಸೋಮವಾರದ ವಹಿವಾಟಿನಲ್ಲಿ ಚೀನಾ ಕರೆನ್ಸಿ ಯುವಾನ್​ ಶೇ.0.6ರಷ್ಟು ಕುಸಿತ ಕಂಡು ಡಾಲರ್ ಎದುರು 7.1396ಕ್ಕೆ ವ್ಯವಹಾರ ನಡೆಸಿದೆ.

ಹನ್ನೊಂದು ವರ್ಷದಲ್ಲೇ ಮಹಾಕುಸಿತ:

ಜಾಗತಿಕ ಆರ್ಥಿಕತೆ ಸದ್ಯದ ಆತಂಕ ವಾತಾವರಣದಲ್ಲಿದ್ದು ಚೀನಾ- ಅಮೆರಿಕ ನಡುವಿನ ವಾಣಿಜ್ಯ ತಿಕ್ಕಾಟ ದೊಡ್ಡ ಪರಿಣಾಮ ಬೀರಿದೆ. ಸೋಮವಾರದ ವಹಿವಾಟಿನಲ್ಲಿ ಶೇ.0.6ರಷ್ಟು ಇಳಿಕೆಯಾಗಿ ಯುವಾನ್ ಹನ್ನೊಂದು ವರ್ಷದಲ್ಲೇ ಡಾಲರ್​ ಎದುರು ಮಹಾಕುಸಿತ ಅನುಭವಿಸಿದೆ.

ಚೀನಾ ಹಾಗೂ ಅಮೆರಿಕ ಎರಡೂ ದೇಶಗಳು ಆಮದಿನ ಮೇಲೆ ಸುಂಕ ಹೆಚ್ಚಳ ಮಾಡಿವೆ. ಈ ಬೆಳವಣಿಗೆ ಜಾಗತಿಕವಾಗಿ ಅಡ್ಡ ಪರಿಣಾಮ ಬೀರಿದೆ. ಚೀನಾದಲ್ಲಿನ ಎಲ್ಲ ವ್ಯವಹಾರವನ್ನು ಹಿಂಪಡೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಕೀತು ಮಾಡಿದ್ದಾರೆ.

ABOUT THE AUTHOR

...view details