ನವದೆಹಲಿ:ಇರಾನ್ಗೆ ಸೇರಿದ ಸೈನೋಪಾ ತೈಲ ಟ್ಯಾಂಕ್ ಮೇಲೆ ಕ್ಷಿಪಣಿ ದಾಳಿಯಿಂದ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಇಂಧನ ದರವು ಶೇ 2ರಷ್ಟು ಏರಿಕೆಯಾಗಿದೆ.
ಶುಕ್ರವಾರದಂದು ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾ ಸಮೀಪ ಎರಡು ಕ್ಷಿಪಣಿಗಳು ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿದವು. ದಾಳಿಯಿಂದಾಗಿ ಕಚ್ಚಾ ತೈಲ ಸೋರಿಕೆಯಾಯಿತು. ಶಂಕಿತ ದಾಳಿಯು ಕೆಂಪು ಸಮುದ್ರ ಮತ್ತು ಗಲ್ಫ್ ವ್ಯಾಪ್ತಿಯಲ್ಲಿ ಸಂಚರಿಸುವ ತೈಲ ಹಡಗುಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ.
ದಾಳಿಯ ತತ್ಪರಿಣಾಮ ಬ್ರೆಂಟ್ ಕಚ್ಚಾ ತೈಲ ದರವು ಶೇ 2ರಷ್ಟು ಹೆಚ್ಚಳವಾಗಿದೆ. ದಾಳಿಗೂ ಮೊದಲು ಪ್ರತಿ ಬ್ಯಾರೆಲ್ ತೈಲವು 59.10 ಡಾಲರ್ನಲ್ಲಿ ಮಾರಾಟ ಆಗುತ್ತಿತ್ತು. ಈಗ ಅದು 60.65 ಡಾಲರ್ಗೆ ತಲುಪಿದೆ. ಹೀಗಾಗಿ, ಕೊಲ್ಲಿ ರಾಷ್ಟ್ರಗಳ ಉದ್ವಿಗ್ನತೆ ತೈಲ ಆಮದು ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಈ ರಾಷ್ಟ್ರಗಳ ಚಿಲ್ಲರೆ ಇಂಧನ ದರದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ 14ರಂದು ಕೂಡ ಸೌದಿ ಅರೇಬಿಯಾದ ಎರಡು ತೈಲ ಸಂಗ್ರಹ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ಬಳಿಕ ಇರಾನ್ ಹಾಗೂ ಸೌದಿ ಅರೇಬಿಯಾದ ನಡುವಿನ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.