ಕರ್ನಾಟಕ

karnataka

ETV Bharat / business

ತೈಲಕ್ಕೂ ತಟ್ಟಿದ 'ಕೊರೊನಾ ವೈರಸ್​' ಸೋಂಕು... 88 ರೂ. ಇಳಿದ ಬ್ರೆಂಟ್​ ತೈಲ - ಕೊರೊನಾ ವೈರಸ್

ಚೀನಾದ ಲೂನರ್​ ಹೊಸ ವರ್ಷಕ್ಕೆ ಕಾಲಿಡುತ್ತಿರುವ ವೇಳೆಯಲ್ಲಿ ಕೊರೊನಾ ವೈರಾಣು ಕಾಣಿಸಿಕೊಂಡಿದ್ದು ಏಷ್ಯಾ, ಅಮೆರಿಕ ಮತ್ತು ಐರೋಪ್ಯ ಷೇರುಪೇಟೆಗಳ ಮೇಲೂ ನಕರಾತ್ಮಕ ಪರಿಣಾಮ ಬೀರಿದೆ. ಕೊರೊನಾ ವೈರಸ್​ ಜಾಗತಿಕ ಬೆಳವಣಿಗೆಯನ್ನು ಹೊಸಕಿ ಹಾಕಿದ್ದು, ಮಾರುಕಟ್ಟೆಯ ಬೇಡಿಕೆಯನ್ನು ಸಂಕೂಚಿತಗೊಳಿಸಿದೆ.

Brent Oil
ಕಚ್ಚಾ ತೈಲ

By

Published : Jan 27, 2020, 4:53 PM IST

ಮುಂಬೈ: 'ಕೊರೊನಾ ವೈರಾಣು ಸೋಂಕು'ನಿಂದ ಮೃತಪಟ್ಟವರ ಸಂಖ್ಯೆ ಏರಿಕೆ ಆಗುತ್ತಿದ್ದಂತೆ, ಇತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾ ತೈಲದ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

ಸೋಮವಾರದಂದು ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್​ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್​ ಮೇಲೆ ಶೇ .2ರಷ್ಟು (₹ 88.24) ಇಳಿಕೆಯಾಗಿದ್ದು, 59.39 ಡಾಲರ್​ನಲ್ಲಿ ಮಾರಾಟ ಆಗುತ್ತಿದೆ. '2,744 ಜನರಿಗೆ ಕೊರೊನಾ ವೈರಾಣು ಸೋಂಕು ತಗುಲಿದ್ದು, ಅದರಲ್ಲಿ 461 ಜನರು ತೀವ್ರ ಸೋಂಕಿನಿಂದ ಬಳಲುತ್ತಿದ್ದಾರೆ' ಎಂದು ಚೀನಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಲೂನರ್​ ಹೊಸ ವರ್ಷಕ್ಕೆ ಕಾಲಿಡುತ್ತಿರುವ ವೇಳೆಯಲ್ಲಿ ಈ ಮಾರಕ ರೋಗ ಕಾಣಿಸಿಕೊಂಡಿದ್ದು ಏಷ್ಯಾ, ಅಮೆರಿಕ ಮತ್ತು ಐರೋಪ್ಯ ಷೇರುಪೇಟೆಗಳ ಮೇಲೂ ನಕರಾತ್ಮಕ ಪರಿಣಾಮ ಬೀರಿದೆ. ಕೊರೊನಾ ವೈರಸ್​ ಜಾಗತಿಕ ಬೆಳವಣಿಗೆಯನ್ನು ಹೊಸಕಿ ಹಾಕಿದ್ದು, ಮಾರುಕಟ್ಟೆಯ ಬೇಡಿಕೆಯನ್ನು ಸಂಕೂಚಿತಗೊಳಿಸಿದೆ.

ಸೋಮವಾರದ ಬೆಳಗ್ಗೆ 10.30ರ ವೇಳೆಗೆ ಪ್ರತಿ ಬ್ಯಾರೆಲ್​ ಬ್ರೆಂಟ್​ ಕಚ್ಚಾ ತೈಲವು ಶೇ 2.22ರಷ್ಟು ಇಳಿಕೆಯಾಗಿ 59.39 ಡಾಲರ್​ನಲ್ಲಿ ಮಾರಾಟ ಆಗುತ್ತಿತ್ತು. ಡಾಲರ್​ ಎದುರು ರೂಪಾಯಿ ಮೌಲ್ಯ 11 ಪೈಸೆಯಷ್ಟು ಏರಿಕೆಯಾಗಿ ₹ 71.44ರಲ್ಲಿ ವಹಿವಾಟು ನಡೆಸುತ್ತಿದೆ.

ABOUT THE AUTHOR

...view details