ಕರ್ನಾಟಕ

karnataka

ETV Bharat / business

17 ವರ್ಷದ ಹಿಂದಿನ ಮಟ್ಟಕ್ಕಿಳಿದೆ ತೈಲ ದರ: ಭಾರತದಲ್ಲಿ P/D ಬೆಲೆ ಎಷ್ಟಿರಬಹುದು?

ಫ್ಯುಚರ್​ ಬ್ರೆಂಟ್ ಕಚ್ಚಾ ತೈಲ ಶೇ 7.33ರಷ್ಟು ಇಳಿಕೆಯಾಗಿದ್ದು, ಬ್ಯಾರೆಲ್‌ಗೆ 24.41 ಡಾಲರ್ ತಲುಪಿದೆ. ವೆಸ್ಟ್​ ಟೆಕ್ಸಾಸ್ ಇಂಟರ್​ಮೀಡಿಯೆಟ್ ಶೇ 5.97ರಷ್ಟು ಕುಸಿದು 21.25 ಡಾಲರ್‌ಗೆ ತಲುಪಿದೆ.

By

Published : Mar 28, 2020, 5:17 PM IST

Brent crude
ಕಚ್ಚಾ ತೈಲ

ನವದೆಹಲಿ:ಕೊರೊನಾ ವೈರಸ್ ಸೃಷ್ಟಿದ ಬಿಕ್ಕಟ್ಟು ಜಾಗತಿಕ ಬೇಡಿಕೆಯನ್ನು ಕುಂಠಿತಗೊಂಡಿದ್ದು, ಭಾರಿ ಪ್ರಮಾಣದ ಪೂರೈಕೆಯಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು 17 ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಫ್ಯುಚರ್​ ಬ್ರೆಂಟ್ ಕಚ್ಚಾ ತೈಲ ಶೇ 7.33ರಷ್ಟು ಇಳಿಕೆಯಾಗಿದ್ದು, ಬ್ಯಾರೆಲ್‌ಗೆ 24.41 ಡಾಲರ್ ತಲುಪಿದೆ. ವೆಸ್ಟ್​ ಟೆಕ್ಸಾಸ್ ಇಂಟರ್​ಮೀಡಿಯೆಟ್ ಶೇ 5.97ರಷ್ಟು ಕುಸಿದು 21.25 ಡಾಲರ್‌ಗೆ ತಲುಪಿದೆ.

ಕೋವಿಡ್-19 ಸೋಂಕು ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿದ್ದರೇ ವಿಶ್ವದ ಬೇಡಿಕೆಯ ಹಸಿವನ್ನು ಸ್ಥಗಿತಗೊಳಿಸಿದೆ. ಕಳೆದ ಕೆಲವು ವಾರಗಳಿಂದ ಪೂರೈಕೆ ಹೆಚ್ಚಾಗಿ ಡಿಮ್ಯಾಂಡ್​ ಕುಸಿದ ಹಿನ್ನಲೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದಿದೆ.

ಸೌದಿಯ ರಿಯಾದ್ ಮತ್ತು ರಷ್ಯಾದ ಮಾಸ್ಕೋ ನಡುವೆ ಭೀಕರ ತೈಲ ಯುದ್ಧ ಭುಗಿಲೆದ್ದ ನಂತರ ಫ್ಯುಚರ್​ ಕಚ್ಚಾ ತೈಲವು ಕಡಿಮೆ ಇಳಿಕೆಯಾಗಿದೆ. ದರ ಇನ್ನಷ್ಟು ಆಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಕೊರೊನಾ ವೈರಸ್ ಸಾಂಕ್ರಾಮಿಕವು ತೈಲ ಬೇಡಿಕೆಯನ್ನು ಕಡಿಮೆ ಮಾಡುತ್ತಿದೆ. ಮಾರ್ಚ್ 6ರಂದು ಒಪೆಕ್ ಸದಸ್ಯರು ತೈಲ ಉತ್ಪಾದನೆಗೆ ನಿರ್ಧರಿಸಿದ್ದವು. ಆದರೆ, ರಷ್ಯಾ ಇದಕ್ಕೆ ಅಸಮ್ಮತಿ ಸೂಚಿಸಿದಾಗ ಸೌದಿ ಅರೇಬಿಯಾ ಉತ್ಪಾದನೆಯ ಸರಬರಾಜು ಹೆಚ್ಚಿಸಿ ಬೆಲೆ ಇಳಿಸಿತ್ತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್​​ ಮತ್ತು ಡೀಸೆಲ್ ಕ್ರಮವಾಗಿ 69.59 ರೂ. & 62.29 ರೂ.ಯಲ್ಲಿ ಮಾರಾಟ ಆಗುತ್ತಿದೆ. ಉಳಿದಂತೆ ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು ಮತ್ತು ಮುಂಬೈನಲ್ಲಿ ಅನುಕ್ರಮವಾಗಿ 72.28 ರೂ. & 65.71 ರೂ., 2.29 ರೂ. & 64.62 ರೂ., 73.97 ರೂ. & 67.82 ರೂ., 71.97 ರೂ. & 64.41 ರೂ. ಹಾಗೂ 75.30 ರೂ. & 65.21 ರೂ. ಮಾರಾಟ ಆಗುತ್ತಿದೆ.

ABOUT THE AUTHOR

...view details