ಕರ್ನಾಟಕ

karnataka

ETV Bharat / business

24 ಲಕ್ಷ ರೂ. ದುಬಾರಿ ಬೆಲೆಯ BMW ಆರ್​ 18 ಬೈಕ್​ ಲಾಂಚ್​: ಫೀಚರ್​ ಕೇಳಿದ್ರೆ ಖರೀದಿಗೆ ಮನಸ್ಸು ಹಾತೊರೆಯುತ್ತೆ!

ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್​ 1802 ಸಿಸಿ ಟ್ವಿನ್ ಸಿಲಿಂಡರ್ ಏರ್ ಕೂಲ್ಡ್, ಆಯಿಲ್ ಕೂಲ್ಡ್ ಬಾಕ್ಸರ್ ಎಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. ಆರು ಗೇರ್‌ಗಳೊಂದಿಗೆ ರಸ್ತೆಗೆ ಲಗ್ಗೆ ಇಡುತ್ತಿದೆ. ಬೈಕ್​ ಎಂಜಿನ್ 3,000 ಆರ್‌ಪಿಎಂನಲ್ಲಿ 157.57 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 2000-4000 ಆರ್‌ಪಿಎಂನಲ್ಲಿ 135.58 ಎನ್‌ಎಂ ಟಾರ್ಕ್ ಹೊರಸೂಸುತ್ತದೆ.

By

Published : Feb 23, 2021, 8:39 PM IST

BMW R 18 Classic
BMW R 18 Classic

ನವದೆಹಲಿ:ಆಟೋಮೋಟಿವ್ ವಲಯದಲ್ಲಿ ಬಿಎಂಡಬ್ಲ್ಯುಗೆ ಇರುವ ವ್ಯಾಮೋಹ ವಿಭಿನ್ನವಾಗಿದೆ. ಕರೈನಾ ಬೈಕು ತನ್ನ ಅನನ್ಯತೆಯಿಂದ ಗ್ರಾಹಕರನ್ನು ಆಕರ್ಷಿಸಿತು. ಇದರ ಬಳಿಕ ಇತ್ತೀಚೆಗೆ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಬೈಕ್​ ಬಿಎಂಡಬ್ಲ್ಯು ಮೋಟರ್​​ರಾಡ್ ಪರಿಚಯಿಸಿದೆ.

ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಎಂದು ಹೆಸರಿಸಲಾಗಿರುವ ಈ ಹೊಸ ಬೈಕ್​ ಕ್ರೂಸರ್ ವಿಭಾಗದಲ್ಲಿ ಕಂಪನಿಯ ಎರಡನೇಯದಾಗಿದೆ. ಇದರ ಬೆಲೆ 24 ಲಕ್ಷ ರೂ. (ಎಕ್ಸ್ ಶೋ ರೂಂ). ಇದು ಹಿಂದಿನ ಆರ್ 18ಗಿಂತ ಹೆಚ್ಚು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಬೈಕ್​ 1802 ಸಿಸಿ ಟ್ವಿನ್ ಸಿಲಿಂಡರ್ ಏರ್ ಕೂಲ್ಡ್, ಆಯಿಲ್ ಕೂಲ್ಡ್ ಬಾಕ್ಸರ್ ಎಂಜಿನ್​ನಿಂದ ನಿಯಂತ್ರಿಸಲ್ಪಡುತ್ತದೆ. ಆರು ಗೇರ್‌ಗಳೊಂದಿಗೆ ರಸ್ತೆಗೆ ಲಗ್ಗೆ ಇಡುತ್ತಿದೆ. ಬೈಕ್​ ಎಂಜಿನ್ 3,000 ಆರ್‌ಪಿಎಂನಲ್ಲಿ 157.57 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 2000-4000 ಆರ್‌ಪಿಎಂನಲ್ಲಿ 135.58 ಎನ್‌ಎಂ ಟಾರ್ಕ್ ಹೊರಸೂಸುತ್ತದೆ. ಇದು 4,750 ಆರ್‌ಪಿಎಂನಲ್ಲಿ 91 ಹೆಚ್‌ಪಿ ಉತ್ಪಾದಿಸುತ್ತದೆ. ದೊಡ್ಡ ವಿಂಡ್‌ಸ್ಕ್ರೀನ್, ಪ್ಯಾಸೆಂಜರ್ ಸೀಟ್, ಸ್ಯಾಡಲ್ ಬ್ಯಾಗ್, ಎಲ್ಇಡಿ ಹೆಚ್ಚುವರಿ ಹೆಡ್‌ಲೈಟ್‌, 16 ಇಂಚಿನ ಫ್ರಂಟ್ ವ್ಹೀಲ್​​​ನಂತಹ ವಿಶೇಷ ಲಕ್ಷಣ ಹೊಂದಿದೆ. ಎಳೆತ ನಿಯಂತ್ರಣ, ಎಂಜಿನ್ ಬ್ರೇಕ್ ನಿಯಂತ್ರಣ, ಹಿಲ್ ಸ್ಟಾರ್ಟ್ ಕಂಟ್ರೋಲ್, ಕೀಲೆಸ್ ರೈಡ್ ಸಿಸ್ಟಮ್, ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್ ಹೆಚ್ಚುವರಿ ಆಕರ್ಷಣೆಗಳಾಗಿವೆ.

ಇದನ್ನೂ ಓದಿ: ಸ್ಟಾರ್ಟ್​​ಅಪ್​ ಪಿಕ್ಸೆಲ್​​​​​ 'ಆನಂದ್' ಉಪಗ್ರಹ ಉಡಾವಣೆ ವಿಳಂಬ: ಕಾರಣವೇನು ಗೊತ್ತೇ?

ಕಂಪ್ಲೀಟ್ ಕನ್​ಸ್ಟ್ರಕ್ಷನ್ ಯುನಿಟ್ (ಸಿಬಿಯು) ಅಡಿಯಲ್ಲಿ ಬೈಕ್​ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು ಎಂದು ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ವಿಕ್ರಮ್ ಪಾವಾ ತಿಳಿಸಿದ್ದಾರೆ.

ಇಂದಿನಿಂದ ಬುಕ್ಕಿಂಗ್ ಪ್ರಾರಂಭವಾಗಿದ್ದು, ಇದನ್ನು ಬಿಎಂಡಬ್ಲ್ಯು ಮೋಟರ್​ರಾಡ್ ಮಾರಾಟಗಾರರ ಮೂಲಕ ಬುಕ್ ಮಾಡಬಹುದು. 1930ರ ದಶಕದಲ್ಲಿ ಬಿಎಂಡಬ್ಲ್ಯು ಆರ್ 5ನಿಂದ ಪ್ರೇರಿತವಾದ ಕಂಪನಿಯು ಈ ಕ್ರೂಸರ್ ಬೈಕ್‌ಗಳನ್ನು ಪರಿಚಯಿಸಿತು. ದುಂಡಗಿನ ಹೆಡ್​​ ಲೈಟ್​, ಉದ್ದನೆಯ ಹ್ಯಾಂಡಲ್ ಬಾರ್‌, ಹೊಗೆ ಸೂಸುವ ಕೊಳವೆಯನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

ABOUT THE AUTHOR

...view details