ಕರ್ನಾಟಕ

karnataka

ETV Bharat / business

ವರ್ಷಾಂತ್ಯಕ್ಕೆ ಕಾರು ಪ್ರಿಯರಿಗೆ ಸಿಹಿಸುದ್ದಿ: 60,000-2.5 ಲಕ್ಷ ರೂ.ವರೆಗೆ ಡಿಸ್ಕೌಂಟ್! - ವೋಲಕ್ಸ್​ವ್ಯಾಗನ್

ಕಾರು ಖರೀದಿದಾರರು ಮುಂದಿನ ವರ್ಷದ ಪ್ರಸ್ತಾವಿತ ಶುಲ್ಕಗಳಿಗೆ ಬದಲಾಗಿ ಪ್ರಸಕ್ತ ವರ್ಷದ ನೋಂದಣಿ ಶುಲ್ಕದೊಂದಿಗೆ ವಾಹನವನ್ನು ಖರೀದಿಸಬಹುದಾಗಿದೆ. 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ಮಾನದಂಡಗಳು ಹಾಗೂ ಬಾಕಿ ಉಳಿದಿರುವ ಬಿಎಸ್-4 ವಾಹನಗಳನ್ನು ಮಾರಾಟ ಮಾಡಲು ಸಹ ಈ ರಿಯಾಯಿತಿ ಅತಿಮುಖ್ಯ ಕಾರಣ.

CAR
ಕಾರು

By

Published : Dec 13, 2019, 1:49 PM IST

ನವದೆಹಲಿ: 2019ರ ಕ್ಯಾಲೆಂಡರ್​ ವರ್ಷಾಂತ್ಯಕ್ಕೆ ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ವರ್ಷದುದ್ದಕ್ಕೂ ಮಾರಾಟದಲ್ಲಿ ಕುಸಿತ ಅನುಭವಿಸಿದ್ದ ವಾಹನೋದ್ಯಮ, ವರ್ಷಾಂತ್ಯದಲ್ಲಿ ಕಾರು ತಯಾರಿಕಾ ಕಂಪನಿಗಳು ಭರ್ಜರಿ ಕೊಡುಗೆ ಹಾಗೂ ವಿಶೇಷ ರಿಯಾಯಿತಿಗಳ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.

ಕಾರು ಖರೀದಿದಾರರು ಮುಂದಿನ ವರ್ಷದ ಪ್ರಸ್ತಾವಿತ ಶುಲ್ಕಗಳಿಗೆ ಬದಲಾಗಿ ಪ್ರಸಕ್ತ ವರ್ಷದ ನೋಂದಣಿ ಶುಲ್ಕದೊಂದಿಗೆ ವಾಹನವನ್ನು ಖರೀದಿಸಬಹುದಾಗಿದೆ. 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ಮಾನದಂಡಗಳು ಹಾಗೂ ಬಾಕಿ ಉಳಿದಿರುವ ಬಿಎಸ್-4 ವಾಹನಗಳನ್ನು ಮಾರಾಟ ಮಾಡಲು ಸಹ ಈ ರಿಯಾಯಿತಿ ಅತಿಮುಖ್ಯ ಕಾರಣ.

ಭಾರತದ ಪ್ರಮುಖ ಕಾರು ಕಂಪನಿಗಳು ವಿಶೇಷ ರಿಯಾಯಿತಿ ಹೀಗಿದೆ:

ಮಾರುತಿ ಸುಜುಕಿ
ಕಾರು ರಿಯಾಯಿತಿ (₹)
ಆಲ್ಟೋ 800 60,000
ಬಲೆನೋ 45,000
ಎಸ್​​-ಕ್ರಾಸ್ 1.13 ಲಕ್ಷ
ಸಿಯಝ್​ (ಪೆಟ್ರೋಲ್​) 75,000
ಲಗ್ನಿಸ್​ (ಪೆಟ್ರೋಲ್​) 65,000
ಹ್ಯುಂಡೈ ಇಂಡಿಯಾ
ಕಾರು ರಿಯಾಯಿತಿ (₹)
ಸ್ಯಾಂಟ್ರೊ 55,000
ವರ್ನಾ 60,000
ಕ್ರೆಟಾ 95,000
ಎಲಾಂಟ್ರಾ 2 ಲಕ್ಷ
ಗ್ರ್ಯಾಂಡ್ i 10 20,000
ವೋಕ್ಸ್​​ವ್ಯಾಗನ್​
ಕಾರು ರಿಯಾಯಿತಿ (₹)
ಪೊಲೊ 1.5 ಲಕ್ಷ
ಹೋಂಡಾ ಕಾರುಗಳು
ಕಾರು ರಿಯಾಯಿತಿ (₹)
ಅಮೇಜ್ 42,000
ಜಾಝ್​ 50,000
ಡಬ್ಲ್ಯೂಆರ್-ವಿ 45,000
ಸಿಟಿ ಸೆಡಾನ್ 62,000
ಹೋಂಡಾ ಸಿವಿಕ್ 2.5 ಲಕ್ಷ
ಟಾಟಾ ಮೋಟರ್ಸ್​
ಕಾರು ರಿಯಾಯಿತಿ (₹)
ಟಿಯಾಗೊ 75,000
ಹೆಕ್ಸಾ 1.65 ಲಕ್ಷ
ನೆಕ್ಸಾನ್ 1.07 ಲಕ್ಷ
ಕಾಂಪ್ಯಾಕ್ಟ್ ಎಸ್‌ಯುವಿ ಹ್ಯಾರಿಯರ್ 65000

ABOUT THE AUTHOR

...view details