ಬೆಂಗಳೂರು:ಲಾಕ್‌ಡೌನ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ರೆಸ್ಟೋರೆಂಟ್ ಹಾಗೂ ಹೋಟೆಲ್ಗಳು ಸೋಮವಾರದಿಂದ ಪುನರಾರಂಭಗೊಳ್ಳಲು ಸಜ್ಜಾಗುತ್ತಿವೆ
ರಾಜಧಾನಿಯ ಐಕಾನಿಕ್ ಸಿಟಿ ಹೋಟೆಲ್ ವಿದ್ಯಾರ್ಥಿ ಭವನ ಸೋಂಕು ಹರಡದಂತೆ ತಡೆಯಲು ನೂತನ ಟೇಬಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಟೇಬಲ್ ಮೇಲೆ ಪಾರದರ್ಶಕ ಗ್ಲಾಸ್ಗಳ ಮೂಲಕ ಗ್ರಾಹಕರನ್ನು ಮತ್ತೆ ಸ್ವಾಗತಿಸಲು ಸನ್ನದ್ಧವಾಗಿದೆ.
77 ವರ್ಷದ ವಿದ್ಯಾರ್ಥಿ ಭವನ ತಾತ್ಕಾಲಿಕ ವ್ಯವಸ್ಥೆಯಡಿ ಪ್ರತಿ ಟೇಬಲ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಿ, ಸುರಕ್ಷತೆ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿದೆ. ಹೋಟೆಲ್ ಸಿಬ್ಬಂದಿ ಮಾಸ್ಕ್ ಹಾಗೂ ಮುನ್ನಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೊನಾ ವೈರಸ್ ಹಬ್ಬದಂತೆ ತಡೆಯುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ವಿದ್ಯಾರ್ಥಿ ಭವನ ಹೊಸದೊಂದು ಪ್ಲಾನ್ ಮಾಡಿದೆ. ಹೋಟೆಲ್‌ನಲ್ಲಿ ಹೊಸ ರೀತಿಯ ಆಸನ ವ್ಯವಸ್ಥೆ ಅಳವಡಿಸಿ ಮೇಜಿನ ಮೇಲೆ ಒಬ್ಬರಿಂದ ಇನ್ನೊಬ್ಬರಿಗೆ ಸಂಪರ್ಕ ಆಗದಂತೆ ತಡೆಯಲಾಗಿದೆ. ಒಂದು ಟೇಬಲ್ ಮೇಲೆ ಪ್ಲಸ್ ಆಕಾರದ ನಾಲ್ಕು ಪಾರದರ್ಶಕ ಗ್ಲಾಸ್ ಅಳವಡಿಸಿ ಗ್ರಹಾಕರ ಸುರಕ್ಷತೆಯನ್ನು ಖಚಿತಪಿಡಿಸಿದೆ.