ಜಾವಾ ಮತ್ತು ಬುಲೆಟ್ ಬೈಕ್‍ಗಳಿಗೆ ಪೈಪೋಟಿಯಾಗಿ ದೇಶಿಯ ಮಾರುಕಟ್ಟೆಗೆ ಬೆನೆಲ್ಲಿ ಇಂಡಿಯಾ ಕಂಪನಿಯ ಇಂಪೀರಿಯಲ್ 400 ಕ್ಲಾಸಿಕ್ ಬೈಕ್ ಬಿಡುಗಡೆಯಾಗುತ್ತಿದೆ.
2017ರ ಮಿಲಾನ್ ಇಐಸಿಎಮ್ಎ ಆಟೋ ಶೋನಲ್ಲಿ ಬೆನಲ್ಲಿ ಕಂಪನಿ ಈ ಬೈಕನ್ನು ಪ್ರದರ್ಶಿಸಿತ್ತು. ಸ್ಟೈಲಿಶ್ ಆಗಿರುವ ಈ ಹೊಸ ಮೋಟರ್ ಬೈಕ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಈ ಹೊಸ ಬೈಕ್ನ ಎರಡು ಮಾಡೆಲ್ಗಳು ಲಭ್ಯವಿದ್ದು, ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ.