ಕರ್ನಾಟಕ

karnataka

ETV Bharat / business

ಆರ್ಥಿಕ ಸಮೀಕ್ಷೆ ಬಹಿರಂಗದ ಬೆನ್ನಲ್ಲೇ 588 ಅಂಕ ಕುಸಿದ ಸೆನ್ಸೆಕ್ಸ್ - ಕ್ಲೋಸಿಂಗ್ ಸೆಷನ್

30 ಷೇರುಗಳ ಸೆನ್ಸೆಕ್ಸ್ 588.59 ಅಂಕ ಅಥವಾ ಶೇ 1.26ರಷ್ಟು ಕುಸಿದು 46,285.77 ಅಂಕಗಳಿಗೆ ತಲುಪಿದೆ. ಆರು ಸೆಷನ್‌ಗಳಲ್ಲಿ 3,506.35 ಅಂಕ ಅಥವಾ ಶೇ 7.04ರಷ್ಟು ಕ್ಷೀಣಿಸಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 182.95 ಅಂಕ ಕುಸಿದು 13,634.60 ಅಂಕಗಳಿಗೆ ತಲುಪಿದೆ. ಕಳೆದ ಆರು ದಿನಗಳಲ್ಲಿ 1,010.10 ಅಂಕ ಅಥವಾ ಶೇ 6.89ರಷ್ಟು ಕುಸಿದಿದೆ.

Sensex
Sensex

By

Published : Jan 29, 2021, 5:18 PM IST

ಮುಂಬೈ:ದೇಶೀಯ ಈಕ್ವಿಟಿ ಮಾರುಕಟ್ಟೆ ಶುಕ್ರವಾರ ಸತತ ಆರನೇ ವಹಿವಾಟಿನಂದು ಕೂಡ ಬಿಎಸ್‌ಇ ಸೆನ್ಸೆಕ್ಸ್ 588 ಅಂಕ ಮತ್ತು ನಿಫ್ಟಿ 183 ಅಂಕ ಕುಸಿದಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಲಿರುವ ಕೇಂದ್ರ ಬಜೆಟ್​ಗೂ ಮುನ್ನ 2020-21ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.

30 ಷೇರುಗಳ ಸೆನ್ಸೆಕ್ಸ್ 588.59 ಅಂಕ ಅಥವಾ ಶೇ 1.26ರಷ್ಟು ಕುಸಿದು 46,285.77 ಅಂಕಗಳಿಗೆ ತಲುಪಿದೆ. ಆರು ಸೆಷನ್‌ಗಳಲ್ಲಿ 3,506.35 ಅಂಕ ಅಥವಾ ಶೇ 7.04ರಷ್ಟು ಕ್ಷೀಣಿಸಿದೆ.

ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 182.95 ಅಂಕ ಕುಸಿದು 13,634.60 ಅಂಕಗಳಿಗೆ ತಲುಪಿದೆ. ಕಳೆದ ಆರು ದಿನಗಳಲ್ಲಿ 1,010.10 ಅಂಕ ಅಥವಾ ಶೇ 6.89ರಷ್ಟು ಕುಸಿದಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಆರೋಗ್ಯ ವೆಚ್ಚ ಜಿಡಿಪಿಯ ಶೇ.3ಕ್ಕೆ ಹೆಚ್ಚಿಸುವಂತೆ ಮುಖ್ಯ ಆರ್ಥಿಕ ಸಲಹೆಗಾರ ಶಿಫಾರಸು

ಸೆನ್ಸೆಕ್ಸ್ ವಿಭಾಗದಲ್ಲಿ 26 ಷೇರುಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡವು. ಡಾ. ರೆಡ್ಡೀಸ್, ಮಾರುತಿ, ಭಾರ್ತಿ ಏರ್‌ಟೆಲ್, ಬಜಾಜ್ ಆಟೋ, ಇನ್ಫೋಸಿಸ್, ಟಿಸಿಎಸ್ ಮತ್ತು ಬಜಾಜ್ ಫಿನ್‌ಸರ್ವ್ ಟಾಪ್​​ ಲೂಸರ್​ಗಳಾದರು. ಮತ್ತೊಂದೆಡೆ ಇಂಡಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ, ಐಸಿಐಸಿಐ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಲಾಭದೊಂದಿಗೆ ಕೊನೆಗೊಂಡವು.

ಏಷ್ಯಾದ ಹಲವು ಷೇರು ಮಾರುಕಟ್ಟೆಗಳು ಕೆಳಮಟ್ಟದಲ್ಲಿ ಕೊನೆಗೊಂಡವು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಡಾಲರ್ ವಿರುದ್ಧ 9 ಪೈಸೆ ಏರಿಕೆ ಕಂಡು 72.96 ರೂ.ಗೆ ತಲುಪಿದೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ಪ್ಯೂಚರ್​ ಪ್ರತಿ ಬ್ಯಾರೆಲ್‌ಗೆ ಶೇ 0.66ರಷ್ಟು ಏರಿಕೆ ಕಂಡು 55.42 ಡಾಲರ್‌ಗೆ ತಲುಪಿದೆ.

ABOUT THE AUTHOR

...view details