ನವದೆಹಲಿ:ಕೇಂದ್ರ ಸಚಿವ ಸಂಪುಟದಲ್ಲಿ ಇಂದು ಮಹತ್ವದ ಮಸೂದೆವೊಂದಕ್ಕೆ ಅನುಮೋದನೆ ನೀಡಲಾಗಿದ್ದು, ಇದರ ಪ್ರಕಾರ ಬ್ಯಾಂಕ್ ದಿವಾಳಿ ಅಥವಾ ಬಂದ್ ಆದರೆ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಅಡಿಯಲ್ಲಿ 90 ದಿನಗಳಲ್ಲಿ 5 ಲಕ್ಷ ರೂ. ವಿಮಾ ಮೊತ್ತ ಪಡೆದುಕೊಳ್ಳಲಿದ್ದಾರೆ.
ಇಂದಿನ ಸಚಿವ ಸಂಪುಟದಲ್ಲಿ (DICGC Amendment Bill 2021)ಮಸೂದೆಗೆ ಅನುಮೋದನೆ ನೀಡಲಾಗಿದೆ. ಇದರ ಪ್ರಕಾರ, ಠೇವಣಿ ವಿಮೆ ಮತ್ತಿ ಸಾಲ ಖಾತರಿ ಮಸೂದೆ ಅಡಿಯಲ್ಲಿ ಬ್ಯಾಂಕ್ನ ಗ್ರಾಹಕರ ಠೇವಣಿ ರಕ್ಷಣೆ ನೀಡಲಾಗುತ್ತಿದ್ದು, ಇದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಒಂದು ವೇಳೆ ಆರ್ಬಿಐನಿಂದ ಬ್ಯಾಂಕ್ ಮೇಲೆ ಕೆಲವೊಂದು ನಿರ್ಬಂಧ ಹೇರಿ ಬ್ಯಾಂಕ್ ಬಂದ್ ಮಾಡಿದರೂ, ಗ್ರಾಹಕರಿಗೆ 90 ದಿನದೊಳಗೆ ಅವರ ಹಣ ಹಾಗೂ ವಿಮೆ ಪಡೆದುಕೊಳ್ಳಬಹುದಾಗಿದೆ.