ಕರ್ನಾಟಕ

karnataka

ETV Bharat / business

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮತ್ತೆ ಶುರು.. ಕಾಯ್ದಿರಿಸುವ ವಿಧಾನ ಹೀಗಿದೆ

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್​ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್, ಒಕಿನಾವಾ ಮತ್ತು ಹೀರೋ ಎಲೆಕ್ಟ್ರಿಕ್ ಉತ್ಪನ್ನಗಳ ಪ್ರತಿಸ್ಪರ್ಧೆಯಾಗಿ ತನ್ನ ಎಲೆಕ್ಟ್ರಿಕ್​ ವಾಹನ ಮಾರುಕಟ್ಟೆಗೆ ಪರಿಚಯಿಸಿತು. ಈ ಸ್ಕೂಟರ್ ಅನ್ನು ಆನ್‌ಲೈನ್‌ನಲ್ಲಿ ಬಜಾಜ್ ವೆಬ್‌ಸೈಟ್‌ನಲ್ಲಿ ಅಥವಾ ಪುಣೆ ಮತ್ತು ಬೆಂಗಳೂರಿನಲ್ಲಿ ಅಧಿಕೃತ ಮಾರಾಟಗಾರರ ಮೂಲಕ ಬುಕ್ ಮಾಡಬಹುದು.

By

Published : Apr 13, 2021, 12:14 PM IST

Bajaj Chetak
Bajaj Chetak

ಮುಂಬೈ: 2019ರ ಕೊನೆಯಲ್ಲಿ ಬಿಡುಗಡೆ ಆದಾಗಿನಿಂದಲೂ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಯಥೇಚ್ಛ ಬೇಡಿಕೆ ಕಂಡಿದೆ. ಕಂಪನಿಯು ಇಲ್ಲಿಯವರೆಗೆ ತಾನು ಮಾರಾಟ ಮಾಡಿದ ಸಂಖ್ಯೆಗಳ ಬಗ್ಗೆ ಬಿಟ್ಟುಕೊಟ್ಟಿಲ್ಲ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್​ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್, ಒಕಿನಾವಾ ಮತ್ತು ಹೀರೋ ಎಲೆಕ್ಟ್ರಿಕ್ ಉತ್ಪನ್ನಗಳ ಪ್ರತಿಸ್ಪರ್ಧೆಯಾಗಿ ತನ್ನ ಎಲೆಕ್ಟ್ರಿಕ್​ ವಾಹನ ಮಾರುಕಟ್ಟೆಗೆ ಪರಿಚಯಿಸಿತು. ಈ ಸ್ಕೂಟರ್ ಅನ್ನು ಆನ್‌ಲೈನ್‌ ಮೂಲಕ ಬಜಾಜ್ ವೆಬ್‌ಸೈಟ್‌ನಲ್ಲಿ ಅಥವಾ ಪುಣೆ ಮತ್ತು ಬೆಂಗಳೂರಿನಲ್ಲಿ ಅಧಿಕೃತ ಮಾರಾಟಗಾರರ ಮೂಲಕ ಬುಕ್ ಮಾಡಬಹುದು.

ಕೆಲವೇ ದಿನಗಳ ಹಿಂದೆ ಮುಂಗಡ ಕಾಯ್ದಿರಿಸುವಿಕೆ ಸ್ಥಗಿತಗೊಳಿಸಿತ್ತು. ಚೀನಾದಲ್ಲಿನ ಸ್ಥಳೀಯ ನಿರ್ಬಂಧಿತ ಘಟಕ ಪೂರೈಕೆಯಿಂದಾಗಿ ಸಕಾಲದಲ್ಲಿ ಕಚ್ಚಾ ಸಾಮಗ್ರಿಗಳು ಲಭ್ಯವಾಗಲಿಲ್ಲ. ಈಗ ಸಾಮಾನ್ಯ ಸ್ಥಿತಿಗೆ ಮರುಳುತ್ತಿದ್ದಂತೆ ಬುಕಿಂಗ್ ಆರಂಭಿಸಿದೆ. ಅದೇ ಸಮಯದಲ್ಲಿ ಬಜಾಜ್ ಆಟೋ ಈ ವರ್ಷ ಸ್ಕೂಟರ್ ಲಭ್ಯತೆ ಕನಿಷ್ಠ 24 ನಗರಗಳಿಗೆ ಹೆಚ್ಚಿಸುವ ಗುರಿ ಹೊಂದಿದೆ. ದ್ವಿಚಕ್ರ ವಾಹನಗಳ ಉತ್ಪಾದನೆಯನ್ನು ಜಾಗರೂಕತೆಯಿಂದ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ: ಕೊರೊನಾ ಮರ್ಮಾಘಾತ: 9 ತಿಂಗಳ ಮಟ್ಟಕ್ಕೆ ಕುಸಿದ ರೂಪಾಯಿ

ಕೊರೊನಾ ಸೋಂಕು ಪ್ರಕರಣಗಳ ಉಲ್ಬಣದಿಂದಾಗಿ ಮಹಾರಾಷ್ಟ್ರದಲ್ಲಿ ಮುಂಬರುವ ಲಾಕ್​​ಡೌನ್ ಬಗ್ಗೆ ಕಂಪನಿಯ ಎಂಡಿ ರಾಕೇಶ್​ ಶರ್ಮಾ ಚಿಂತಿತರಾಗಿದ್ದರು. ಖರೀದಿ ಮತ್ತು ವಿತರಣಾ ನಿರ್ಧಾರಗಳನ್ನು ಮುಂದೂಡುವುದರಿಂದ ಮಾರಾಟವು ಪ್ರತಿಕೂಲ ಪರಿಣಾಮ ಬೀರುತ್ತದೆ. ಆರ್ಥಿಕತೆಯು ಕುಂಠಿತವಾಗಲಿದೆ ಮತ್ತು ಗ್ರಾಹಕರ ವಿಶ್ವಾಸವೂ ಕಡಿಮೆಯಾಗುತ್ತದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂ. ಆಸುಪಾಸಿನಲ್ಲಿ ಇರಲಿದೆ. ಇವುಗಳು ಎರಡು ರೂಪಾಂತರಗಳಲ್ಲಿ ಲಭ್ಯವಿದೆ ಎಂದರು.

3ಕೆಡಬ್ಲ್ಯುಎಚ್​ ಲಿ - ಅಯಾನ್ ಬ್ಯಾಟರಿ ಪ್ಯಾಕ್ ಬಜಾಜ್ ಚೇತಕ್‌ಗೆ ಶಕ್ತಿ ನೀಡುತ್ತದೆ. ಈ ಮೋಟಾರ್ 4.1 ಕಿ.ವ್ಯಾಟ್ ಶಕ್ತಿ ನೀಡುತ್ತದೆ. ಆದರೆ ಉತ್ಪಾದಿಸಿದ ಟಾರ್ಕ್ 16 ಎನ್ಎಂ. ಸ್ಕೂಟರ್‌ನೊಂದಿಗೆ ಎರಡು ರೈಡಿಂಗ್ ಮೋಡ್‌ ನೀಡುತ್ತದೆ. ಇಕೋ ಮತ್ತು ಪವರ್ ಸ್ಕೂಟರ್‌ ಗರಿಷ್ಠ 95 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಬ್ಯಾಟರಿ ಬಾಳ್ಕೆ 70,000 ಕಿ.ಮೀ. ತನಕ ಬರಲಿದೆ. ಸ್ಕೂಟರ್‌ನಲ್ಲಿ ಒಟ್ಟಾರೆ ಮೂರು ವರ್ಷ ಅಥವಾ 50,000 ಕಿ.ಮೀ ಖಾತರಿ ನೀಡಲಾಗುತ್ತದೆ.

ABOUT THE AUTHOR

...view details