ಕರ್ನಾಟಕ

karnataka

ರಮ್​ ಪ್ರೊಡಕ್ಷನ್​ ನಿಲ್ಲಿಸಿ ಸ್ಯಾನಿಟೈಸರ್​ ಉತ್ಪಾದನೆ ಆರಂಭಿಸಿದ ಬಕಾರ್ಡಿ

By

Published : Mar 30, 2020, 8:47 AM IST

ಜಗತ್ತಿನಾದ್ಯಂತ ಸ್ಯಾನಿಟೈಸರ್​ ಅಗತ್ಯತೆ ಹೆಚ್ಚಿರುವುದನ್ನು ಗಮನಿಸಿರುವ ಬಕಾರ್ಡಿ ಸಂಸ್ಥೆಯು ತಕ್ಷಣವೇ ರಮ್​ ಉತ್ಪಾದನೆಯನ್ನುಸ್ಥಗಿತಗೊಳಿಸಿ ಸ್ಯಾನಿಟೈಸರ್​ ಉತ್ಪಾದನೆಗೆ ಮುಂದಾಗಿದೆ.

ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದಿಸಲು ಮುಂದಾ ಬಕಾರ್ಡಿ
ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದಿಸಲು ಮುಂದಾ ಬಕಾರ್ಡಿ

ಜಗತ್ತಿನಾದ್ಯಂತ ಕೊರೊನಾ ಭೀತಿ ಎಲ್ಲರನ್ನೂ ಕಾಡುತ್ತಿದೆ. ಈ ಹಿನ್ನೆಲೆ ಸ್ಯಾನಿಟೈಸರ್​​ಗೆ ಭಾರೀ ಬೇಡಿಕೆ ಉಂಟಾಗಿದ್ದು, ಹಲವಾರು ಮದ್ಯದ ಕಂಪನಿಗಳು ಈಗ ಮದ್ಯ ತಯಾರು ಮಾಡುವುದನ್ನು ಬಿಟ್ಟು ಸ್ಯಾನಿಟೈಸರ್​ ತಯಾರು ಮಾಡಲು ಮುಂದಾಗಿವೆ.

ಬಕಾರ್ಡಿ ಕಂಪನಿಯವರು ಮದ್ಯ ತಯಾರು ಮಾಡುವುದನ್ನು ನಿಲ್ಲಿಸಿ ಹ್ಯಾಂಡ್ ಸ್ಯಾನಿಟೈಜರ್ ತಯಾರು ಮಾಡುವುದಾಗಿ ಈ ಹಿಂದೆ ತಿಳಿಸಿದ್ದರು. ಅದರಂತೆ ಈಗ ಈ ಉತ್ಫಾದನೆಗೆ ಮುಂದಾಗಿದ್ದಾರೆ. ಪೆರ್ನೋಡ್-ರಿಕಾರ್ಡ್ ಕಂಪನಿ ಕೂಡ ಕೆಲವು ದಿನಗಳ ಹಿಂದೆ ಘೋಷಿಸಿದಂತೆ ಮತ್ತು ಎಲ್ವಿಎಂಹೆಚ್ ಸುಗಂಧ ದ್ರವ್ಯ ಕಾರ್ಖಾನೆಗಳು ವಾರದ ಮುಂಚೆಯೇ ಘೋಷಿಸಿದಂತೆ, ಬಕಾರ್ಡಿ ಗೆ ಸಹಾಯ ಮಾಡಲು ಜಗತ್ತಿನಾದ್ಯಂತ ಇರುವ ತನ್ನ ಉತ್ಪಾದನಾ ಘಟಕಗಳನ್ನು ಸ್ಯಾನಿಟೈಸರ್​ ಉತ್ಪಾದನೆಗೆ ತಕ್ಕಂತೆ ಪರಿವರ್ತಿಸಲು ಮುಂದಾಗಿವೆ.

ಇನ್ನು ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದಿಸಲು ಬಕಾರ್ಡಿ ತನ್ನ ಆಲ್ಕೋಹಾಲ್ ಅನ್ನು ಬಳಕೆ ಮಾಡಿಕೊಳ್ಳುತ್ತದೆ. ಇದು ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಡಬ್ಲುಹೆಚ್​ಒ ಶಿಫಾರಸು ಮಾಡಿದ ಆಲ್ಕೋಹಾಲ್ ಕಂಟೆಂಟ್​ ಅನ್ನು ಒಳಗೊಂಡಿದೆ.

ಕೊರೊನಾ ಸೋಂಕು

ಬಕಾರ್ಡಿಯ ಪೋರ್ಟ್​ಫೋಲಿಯೋ ಅಡಿಯಲ್ಲಿ ಗ್ರೇ ಗೂಸ್ ವೋಡ್ಕಾ, ಬಾಂಬೆ ಸಫೈರ್​ ಜಿನ್, ಬಕಾರ್ಡಿ ರಮ್ ಮತ್ತು ಇತರ 200 ಬ್ರಾಂಡ್‌ಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿವೆ. ವಿಶ್ವದ ಅತಿದೊಡ್ಡ ಖಾಸಗಿ ಸ್ವಾಮ್ಯದ ಹಾಗೂ ಕುಟುಂಬ ಸ್ವಾಮ್ಯದ ಸ್ಪಿರಿಟ್ಸ್ ಕಂಪನಿಯಾಗಿ ಬಕಾರ್ಡಿ ಕಾರ್ಯನಿರ್ವಹಿಸುತ್ತಿವೆ.

ಅತೀ ಬೇಡಿಕೆ ಮತ್ತು ಅತ್ಯಾವಶ್ಯಕವಾಗಿ ಬೇಕಾಗಿರುವ ಹ್ಯಾಂಡ್​ ಸ್ಯಾನಿಟೈಸರ್​ನ್ನು ಉತ್ಪಾದನೆ ಮಾಡಿ ಜಗತ್ತಿಗೆ ತನ್ನದೇ ಆದ ರೀತಿಯಲ್ಲಿ ಈ ದೈತ್ಯ ಕಂಪನಿ ಸಹಕಾರ ಮಾಡಲು ಮುಂದಾಗಿದೆ. ತಮ್ಮ ಉತ್ಪಾದನಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು 267,000 ಗ್ಯಾಲನ್ ಹ್ಯಾಂಡ್ ಸ್ಯಾನಿಟೈಜರ್ ಅನ್ನುಈ ಕಂಪನಿ ಉತ್ಪಾದಿಸಲಿದೆ.

ABOUT THE AUTHOR

...view details