ಕರ್ನಾಟಕ

karnataka

ETV Bharat / business

ವಾಹನೋದ್ಯಮ ಬೆಳವಣಿಗೆ​ ಸ್ಟೋರಿ 'ಎಂಡಿಂಗ್ ಸ್ಟೇಜ್​​'ನಲ್ಲಿದೆ: ಟಾಟಾ ಮೋಟರ್ಸ್​ ಸಿಇಒ ಕಳವಳ - ಎಸ್ಐ​ಎಎಂ

ಸಿಇಒಗಳ ಸಮಾವೇಶದ 'ಆಟೋಮೋಟಿವ್ ಉದ್ಯಮದ ಪುನರುಜ್ಜೀವನ'ದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ಸಿಇಒ ಗುಂಟೆರ್ ಬುಶೆಕ್ ಅವರು, ಕಾರು ಮಾರುಕಟ್ಟೆಯ ಬಗ್ಗೆ ಈಗಾಗಲೇ ಸಾಕಷ್ಟು ಹೇಳಲಾಗಿದೆ. ಇದನ್ನು ನಾಟಕೀಯ ರೀತಿಯಲ್ಲಿ ತೆಗೆದುಕೊಂಡು ತೀರ್ಮಾನಿಸೋಣ. ಭಾರತೀಯ ಮಾರುಕಟ್ಟೆಯ ಕಥೆ ಕುಸಿಯುವುದಕ್ಕೆ ಕಾರಣಗಳನ್ನು ತಿಳಿಸಲಾಗಿದೆ ಎಂದರು.

ಸಾಂದರ್ಭಿಕ ಚಿತ್ರ

By

Published : Sep 6, 2019, 11:40 AM IST

ನವದೆಹಲಿ: ಆಟೋಮೊಬೈಲ್ ವಲಯವನ್ನು ಕುಂಠಿತಗೊಳಿಸಿರುವ ವಾಹನಗಳ ಮಾರಾಟದ ಕುಸಿತವು ಉದ್ಯಮದ ಬೆಳವಣಿಗೆಯ ಕಥೆಯನ್ನೇ ಕೊನೆಗಾಣಿಸಬಹುದು ಎಂದು ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಸಿಇಒಗಳ ಸಮಾವೇಶದ 'ಆಟೋಮೋಟಿವ್ ಉದ್ಯಮದ ಪುನರುಜ್ಜೀವನ'ದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್ ಸಿಇಒ/ ಎಂಡಿ ಗುಂಟೆರ್ ಬುಶೆಕ್ ಅವರು, ಕಾರು ಮಾರುಕಟ್ಟೆಯ ಬಗ್ಗೆ ಈಗಾಗಲೇ ಸಾಕಷ್ಟು ಹೇಳಲಾಗಿದೆ. ಇದನ್ನು ನಾಟಕೀಯ ರೀತಿಯಲ್ಲಿ ತೆಗೆದುಕೊಂಡು ತೀರ್ಮಾನಿಸೋಣ. ಭಾರತೀಯ ಮಾರುಕಟ್ಟೆಯ ಕುಸಿಯುವುದಕ್ಕೆ ಕಾರಣಗಳನ್ನು ತಿಳಿಸಲಾಗಿದೆ ಎಂದರು.

ಕಡಿಮೆಯಾಗುತ್ತಿರುವ ಆರ್ಥಿಕ ಚಟುವಟಿಕೆಗಳು, ಬೇಡಿಕೆಯ ಕುಸಿತ, ದ್ರವ್ಯತೆ ನಿರ್ಬಂಧಗಳು ಸೇರಿದಂತೆ ಹಲವು ಅಂಶಗಳನ್ನು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟದ (ಎಸ್ಐ​ಎಎಂ) ಸಮಾವೇಶದಲ್ಲಿ ಉಲ್ಲೇಖಿಸಿದ್ದರು.

ಬುಶೆಕ್ ಸೆಪ್ಟೆಂಬರ್ 20ರ ಮೊದಲು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಕಡಿಮೆ ಮಾಡುವ ಮೂಲಕ ಸರ್ಕಾರವು ಉದ್ಯಮವನ್ನು ಬೆಂಬಲಿಸಬೇಕು ಎಂದು ಸಲಹೆ ನೀಡಿದ್ದರು. 'ಹಬ್ಬಗಳ ಸಂದರ್ಭದಲ್ಲಿ ನಿರೀಕ್ಷಿತ ಮಾರಾಟವನ್ನು ಯಾರೂ ತಪ್ಪಿಸಿಕೊಳ್ಳಬಾರದು' ಎಂದು ಕಿವಿಮಾತು ಸಹ ಹೇಳಿದ್ದರು.

ಕಳೆದ ಕೆಲ ತ್ರೈಮಾಸಿಕಗಳಲ್ಲಿನ ಬೇಡಿಕೆಯ ಇಳಿಕೆಯಿಂದ ಭಾರತದ ಬೆಳವಣಿಗೆಯ ಹಾದಿ ದೂರವಾಗುತ್ತಿದೆ. ಪ್ರಸ್ತುತ ಬಿಕ್ಕಟ್ಟುಗಳಿಂದ ಹೊರಬರಲು ಮತ್ತು ಹಬ್ಬದ ಸಂದರ್ಭದಲ್ಲಿ ಮಾರಾಟ ಬೆಳವಣಿಗೆ ಕೈತಪ್ಪದಿರಲು ನಮಗೆ ಸರ್ಕಾರದಿಂದ ಇಲ್ಲಿ ಮತ್ತು ಈಗಲೇ ಜಿಎಎಸ್​ಟಿ ಹಾಗೂ ಹಳೆಯ ವಾಹನ ನೀತಿಗಳ ಕುರಿತು ಸ್ಪಷ್ಟತೆ ಬೇಕು ಎಂದು ಸಮಾವೇಶದ ಬಳಿಕದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details