ನವದೆಹಲಿ: 2019ರ ಕ್ಯಾಲೆಂಡರ್ ವರ್ಷದಲ್ಲಿ ವಾಹನಗಳ ಮಂದಗತಿಯ ಮಾರಾಟ ಬೆಳವಣಿಗೆ ದರದದಿಂದ ಬಳಲಿದ ಭಾರತೀಯ ವಾಹನ ಉದ್ಯಮ, ಮುಂದಿನ ಹಣಕಾಸು ವರ್ಷದಲ್ಲಿ ಅತ್ಯುತ್ತಮ ವಹಿವಾಟು ನಡೆಸುವ ನಿರೀಕ್ಷೆಗಳನ್ನು ಇರಿಸಿಕೊಂಡಿದೆ.
ವಾಹನಗಳ ಹೊಸ ಮತ್ತು ನವೀಕರಿಸಿದ ಎಂಜಿನ್ ಮಾದರಿಗಳ ಜತೆಗೆ ಮಾರುಕಟ್ಟೆಗೆ ಕಾಲಿಡಲು ಉದ್ಯಮವು ಹವಣಿಸುತ್ತಿದೆ. ಆರ್ಥಿಕ ಕುಸಿತದ ಹೊಡೆತದಿಂದ ಉದ್ಯಮವು ಹಂತ - ಹಂತವಾಗಿ ಹೊರಬರಲಿದೆ ಎಂಬ ನಿರೀಕ್ಷೆ ಉದ್ಯಮಿಗಳಲ್ಲಿದೆ. ಹೊಗೆ ಹೊರಸೂಸುವಿಕೆಯ ನೂತನ ಮಾನದಂಡವಾದ ಬಿಎಸ್ -6ನ ಕಟ್ಟುನಿಟ್ಟಿನ ನಿಯಮಗಳು ವಾಹನಗಳ ದರ ಏರಿಕೆಗೆ ಸವಾಲಾಗಿದ್ದರೂ ಜನರು ಶೋ ರೂಂಗಳತ್ತ ಮುಖಮಾಡಲು ನೆರವಾಗಬಲದು ಎಂಬುದು ಅವರ ಆಸೆಯ.
ಭಾರತದ ಪ್ರಮುಖ ಮೋಟಾರು ಪ್ರದರ್ಶನದ ದ್ವೈವಾರ್ಷಿಕ ಆಟೋ ಎಕ್ಸ್‌ಪೋ ವಾಹನೋದ್ಯಮ ಪುನರುಜ್ಜೀವನದ ವೇದಿಕೆಯಾಗಬಹುದು. ಇದು ಕುಸಿತದ ಹಾದಿಯಲ್ಲಿ ಇದ್ದಾಗಲೇ ಕಳೆದ ಹಬ್ಬದ ಋತುವಿನಂದು ಆರಂಭವಾಯಿತು. ಆದರು, ಜನರು ಅಲ್ಪ ಮಟ್ಟಿನ ಸ್ಪಂದನೆ ತೋರಿದ್ದಾರೆ.
ದ್ವಿಚಕ್ರ ವಾಹನಗಳಿಂದ ಹಿಡಿದು ಕಾರು ಮತ್ತು ಬೃಹತ್ ಟ್ರಕ್‌ಗಳ ಮಾರಾಟವು ಕೆಂಪು ಬಣ್ಣದಲ್ಲಿದ್ದವು. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಸಗಟು ರವಾನೆ ಶೇ 13-17ರಷ್ಟು ಕುಸಿತವಾಗಿದೆ. ಇದರೊಂದಿಗೆ ಉದ್ಯಮವು 2019-20ರಲ್ಲಿ ಮುಚ್ಚುವ ಭೀತಿಯನ್ನು ಎದುರಿಸಿತ್ತು.
ಮಾರಾಟದ ಕುಸಿತದಿಂದ ಕುಸಿತವು ಅನೇಕ ಕಂಪನಿಗಳ ಉತ್ಪಾದನಾ ಕಾರ್ಯಾಚರಣೆಯ ತೊಂದರೆಗಳನ್ನು ಎದುರಿಸಬೇಕಾಯಿತು. ಇದರಿಂದ ಕಂಪನಿಗಳು ತಮ್ಮ ಉತ್ಪಾದನಾ ಯೋಜನೆಗಳನ್ನು ವರ್ಷವಿಡಿ ಮರುಮೌಲ್ಯಮಾಪನ ಮಾಡಬೇಕಾಯಿತು. ಮಾರಾಟಗಾರರ ಮತ್ತು ವಾಹನ ಘಟಕಗಳು ಸೇರಿದಂತೆ ಸುಮಾರು 3.5 ಲಕ್ಷ ಜನರು ಉದ್ಯೋಗಗಳನ್ನು ಕಳೆದುಕೊಂಡರು.
ಇಂತಹ ಕಠಿಣ ಸಮಯದ ಹೊರತಾಗಿಯೂ ನಾವು ಯಾವುದೇ ಭರವಸೆಗಳು ಕಳೆದುಕೊಂಡಿಲ್ಲ. 2020-21ರಲ್ಲಿ ಉದ್ಯಮ ಚೇತರಿಸಿಕೊಳ್ಳಲಿದೆ ಎಂಬ ಭರವಸೆಯನ್ನು ಭಾರತೀಯ ವಾಹನ ತಯಾರಕ ಸಂಸ್ಥೆ (ಎಸ್ಐಎಎಂ) ವ್ಯಕ್ತಪಡಿಸಿದೆ.