ನವದೆಹಲಿ :ಹೊಸ ವರ್ಷದ ಮೊದಲ ದಿನದಿಂದಲೇ ಬ್ಯಾಂಕ್ ಗ್ರಾಹಕರು ಎಟಿಎಂ ಮಾಸಿಕ ಉಚಿತ ವಹಿವಾಟುಗಳ ಮಿತಿ ಮೀರಿದ್ರೆ ಪ್ರಸ್ತುತವಿರೋದಕ್ಕಿಂತ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಕೆಲ ಬ್ಯಾಂಕ್‌ಗಳು ಕೂಡ ಗ್ರಾಹಕರಿಗೆ ಮಾಹಿತಿ ರವಾನಿಸಿವೆ.
ಮಾಸಿಕ ಉಚಿತ ವಹಿವಾಟು ಮೀರಿದ್ರೆ ಪ್ರಸ್ತುತ ಇರುವುದಕ್ಕಿಂತ 1 ರೂಪಾಯಿಯ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಯಾಕೆಂದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2022ರ ಜನವರಿ 1ರಿಂದ ನಗದು ಹಾಗೂ ನಗದುರಹಿತ ಎಟಿಎಂ ವ್ಯವಹಾರಗಳು ನಿಗದಿತ ಮಾಸಿಕ ಮಿತಿ ಮೀರಿದ್ರೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದೆ.
ಪ್ರಸ್ತುತ ಎಟಿಎಂಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚುವರಿ ವ್ಯವಹಾರ ನಡೆಸಿದ್ರೆ ಗ್ರಾಹಕ ಪ್ರತಿ ವ್ಯವಹಾರಕ್ಕೆ 20ರೂ. ಶುಲ್ಕ ಪಾವತಿಸಬೇಕಿದೆ. ಆದ್ರೆ, ಇಂದಿನಿಂದ ಹೆಚ್ಚುವರಿ ವ್ಯವಹಾರದ ಮೇಲಿನ ಶುಲ್ಕವನ್ನು ಒಂದು ರೂಪಾಯಿ ಹೆಚ್ಚಿಸಿ 21 ರೂಪಾಯಿ ಮಾಡಲಾಗಿದೆ. ಈ ಬಗ್ಗೆ ಆರ್‌ಬಿಐ 2021ರ ಜೂನ್ 10ರಂದು ಅಧಿಸೂಚನೆ ಹೊರಡಿಸಿದೆ. ಬ್ಯಾಂಕುಗಳಿಗೆ ಅನುಮತಿ ನೀಡಿರುವ ಹಿನ್ನೆಯಲ್ಲಿ ಮಿತಿ ಮೀರಿದರೆ ಇಂದಿನಿಂದ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ.