ಕರ್ನಾಟಕ

karnataka

ETV Bharat / business

ಅರುಂಧತಿ ಗೋಲ್ಡ್​ ಸ್ಕೀಮ್... ಸರ್ಕಾರದಿಂದ ಚಿನ್ನ ಖರೀದಿಸಲು ವಧುಗೆ 30,000 ರೂ. ಧನ ಸಹಾಯ..! - ಅಸ್ಸೊಂ

2020ರ ಜನವರಿ ತಿಂಗಳಿಂದ ಅಸ್ಸೊಂ ರಾಜ್ಯ ಸರ್ಕಾರವು ಅರುಂಧತಿ ಚಿನ್ನದ ಯೋಜನೆಯೊಂದನ್ನು ಆರಂಭಿಸುತ್ತಿದ್ದು, ವಿವಾಹ ನೋಂದಾಯಿತ ಮಹಿಳೆಗೆ ಚಿನ್ನಾಭರಣ ಖರೀದಿಗಾಗಿ 30,000 ರೂ. ಧನ ಸಹಾಯ ನೀಡುತ್ತಿದೆ.

Marriage
ಮದುವೆ

By

Published : Dec 31, 2019, 5:40 PM IST

ದಿಸ್ಪುರ್​: ಅಸ್ಸೊಂ ರಾಜ್ಯ ಸರ್ಕಾರವು ವಧುವಿನ ಮನೆಯವರಿಗೆ ಅರುಂಧತಿ ಗೋಲ್ಡ್​ ಸ್ಕೀಮ್​ ಯೋಜನೆಯಡಿ ಹೊಸ ವರ್ಷದ ಉಡುಗೊರೆಯೊಂದನ್ನು ನೀಡುತ್ತಿದೆ.

2020ರ ಜನವರಿ ತಿಂಗಳಿಂದ ಅಸ್ಸೊಂ ಸರ್ಕಾರವು ಅರುಂಧತಿ ಚಿನ್ನದ ಯೋಜನೆಯೊಂದನ್ನು ಆರಂಭಿಸುತ್ತಿದ್ದು, ವಿವಾಹ ನೋಂದಾಯಿತ ಮಹಿಳೆಗೆ ಚಿನ್ನಾಭರಣ ಖರೀದಿಗಾಗಿ 30,000 ರೂ. ಧನ ಸಹಾಯ ನೀಡುತ್ತಿದೆ.

ಈ ಯೋಜನೆ ಜಾರಿಯಿಂದ 2020ರಲ್ಲಿ ಅಸ್ಸೊಂ ಸರ್ಕಾರಕ್ಕೆ ಹೆಚ್ಚುವರಿಯಾಗಿ 800 ಕೋಟಿ ರೂ. ವೆಚ್ಚ ತಗುಲುತ್ತದೆ. ಯೋಜನೆಯ ಫಲಾನುಭವಿಯಾಗಲು ಮದುವೆಯ ಮುನ್ನ ವಧು ವಿಶೇಷ ಮದುವೆ ಕಾಯ್ದೆ 1954ರ ಅಡಿಯಲ್ಲಿ ವಿವಾಹವನ್ನು ನೋಂದಾಯಿಸಿಕೊಳ್ಳಬೇಕಿದೆ. ವಧು ಮತ್ತು ವಧುವಿನ ಪೋಷಕರ ವಾರ್ಷಿಕ ಆದಾಯ ₹ 5 ಲಕ್ಷಕ್ಕಿಂತ ಹೆಚ್ಚಿರಬಾರದು. ಫಲಾನುಭವಿಗೆ ಕನಿಷ್ಠ 18- 21 ವರ್ಷ ವಯಸ್ಸಾಗಿರಬೇಕು.

ABOUT THE AUTHOR

...view details