ಕರ್ನಾಟಕ

karnataka

ETV Bharat / business

ಷೇರುಪೇಟೆಯಲ್ಲಿ ಭಾರಿ ಏರಿಕೆ: ಆರಂಭದಲ್ಲಿ 350 ಅಂಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್​ - stocks opened higher on Friday

ಮುಂಬೈ ಷೇರು ಪೇಟೆ 350 ಅಂಕಗಳಷ್ಟು ಏರಿಕೆ ದಾಖಲಿಸುವ ಮೂಲಕ 48,429 ಅಂಕಗಳೊಂದಿಗೆ ವ್ಯವಹಾರ ನಿರತವಾಗಿತ್ತು.

ಷೇರುಪೇಟೆಯಲ್ಲಿ ಭಾರಿ ಏರಿಕೆ
ಷೇರುಪೇಟೆಯಲ್ಲಿ ಭಾರಿ ಏರಿಕೆ

By

Published : Jan 8, 2021, 9:40 AM IST

ಮುಂಬೈ: ಏಷ್ಯಾ ಹಾಗೂ ವಿಶ್ವ ಮಾರುಕಟ್ಟೆಯಲ್ಲಿ ಕಂಡು ಬಂದ ಸಕಾರಾತ್ಮಕ ಅಂಶಗಳಿಂದ ಇಂದು ಷೇರುಪೇಟೆ ಆರಂಭಿಕ ಭಾರಿ ಏರಿಕೆ ದಾಖಲಿಸಿದೆ. ಮುಂಬೈ ಷೇರು ಪೇಟೆ 350 ಅಂಕಗಳಷ್ಟು ಏರಿಕೆ ದಾಖಲಿಸುವ ಮೂಲಕ 48,429 ಅಂಕಗಳೊಂದಿಗೆ ವ್ಯವಹಾರ ನಿರತವಾಗಿತ್ತು.

ಇನ್ನು ನಿಫ್ಟಿ ಕೂಡಾ ಏರಿಕೆ ದಾಖಲಿಸಿ 14,237 ಅಂಕಗಳೊಂದಿಗೆ ವ್ಯವಹಾರ ಮುಂದುವರಿಸಿತ್ತು. ಇಂದು ಟಿಸಿಎಸ್​ ಹಾಗೂ ಐದು ಐಟಿ ಕಂಪನಿಗಳು ಡಿಸೆಂಬರ್​ ತಿಂಗಳ ತ್ರೈಮಾಸಿಕ ವರದಿ ಬಹಿರಂಗ ಪಡಿಸುವ ಹಿನ್ನೆಲೆಯಲ್ಲಿ ಈ ಉತ್ಸಾಹ ಕಂಡುಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಳ: ಲಾಕ್​ಡೌನ್​ ಮೊದಲಿಗಿಂತಲೂ ಡಿಸೆಂಬರ್​ನಲ್ಲಿ ಹೆಚ್ಚು ನಿರುದ್ಯೋಗಿಗಳು

ಇನ್ನು ಅಮೆರಿಕದ ಡಾ. ಜೋನ್ಸ್​ ಹಾಗೂ ಎಸ್​ ಅಂಡ್​ ಪಿ ಸುಮಾರು ಶೇ 1.48 ರಷ್ಟು ಏರಿಕೆ ದಾಖಲಿಸಿ ಹೂಡಿಕೆದಾರರಲ್ಲಿ ಮಂದಹಾಸ ಮೂಡುವಂತೆ ಮಾಡಿವೆ.

ABOUT THE AUTHOR

...view details